ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಬಿಜೆಪಿ 150 ಸೀಟು ಗೆಲ್ಲಲು ನಾನು ನಿಮ್ಮ ಜೊತೆಯಾಗುತ್ತೇನೆ: ಜನಾರ್ದನ ರೆಡ್ಡಿ ಶಪಥ !

ದಾವಣಗೆರೆ: ನನಗೆ ಶಾಸಕನಾಗಬೇಕು, ಸಚಿವ ಆಗಬೇಕು ಅನ್ನೋ ಆಸೆ ಇಲ್ಲ. ಮುಂದೆ ಬಿಜೆಪಿ 150 ಸೀಟು ಗೆಲ್ಲಲು ನಾನು ನಿಮ್ಮ ಜೊತೆಯಾಗುತ್ತೇನೆ ಎಂದು‌ ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ.

ಹರಪನಹಳ್ಳಿಯಲ್ಲಿ ಶಾಸಕರೂ ಆದ ತನ್ನ ಅಣ್ಣ ಕರುಣಾಕರ್ ರೆಡ್ಡಿ ಅವರ ಷಷ್ಠಾಬ್ದಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಬಸವರಾಜ್ ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ದರು. ನನಗೆ ಅವತ್ತೆ ಅನಿಸಿತ್ತು. ಯಡಿಯೂರಪ್ಪ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ ಅಂತ. ಮುಂದೆ ಬಿಜೆಪಿ ಅಧಿಕಾರಕ್ಕೆ ಬರಲು ಪಕ್ಷದ ಜೊತೆಯಾಗುತ್ತೇನೆ ಎಂದು ತಿಳಿಸಿದರು.

ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗಿದ್ದನ್ನ ಸಮರ್ಥಿಸಿಕೊಂಡ ಜನಾರ್ದನ್ ರೆಡ್ಡಿ ಅವರು, ಬಳ್ಳಾರಿ ಕಾಂಗ್ರೆಸ್ ಭದ್ರ ಕೋಟೆಯಾಗಿತ್ತು. ಈ ಮೊದಲು ಬಳ್ಳಾರಿಯಿಂದ ಸುಷ್ಮಾ ಸ್ವರಾಜ್ ಸ್ಪರ್ಧೆ ಮಾಡಿದ್ರು. ಆದರೆ ಅವರು ಅಲ್ಪ ಮತಗಳ ಅಂತರದಿಂದ ಸೋತರು. ಕರುಣಾಕರ್ ರೆಡ್ಡಿಯಂತೆ ಸಿಎಂ ಬಸವರಾಜ್ ಬೊಮ್ಮಾಯಿ ಹಿರಿಯ ಅಣ್ಣನಂತೆ. ನಾವು ಮೂರು ಜನ ಅಣ್ಣತಮ್ಮಂದಿರಲ್ಲ ನಾಲ್ಕು ಜನ. ಶ್ರೀರಾಮುಲು ಸೇರಿ ನಾಲ್ಕು ಜನ ಅಣ್ಣ ತಮ್ಮಂದಿರಿದ್ದೇವೆ ಎಂದರು.

Edited By :
PublicNext

PublicNext

11/04/2022 10:44 am

Cinque Terre

68.26 K

Cinque Terre

19

ಸಂಬಂಧಿತ ಸುದ್ದಿ