ಚಿಕ್ಕಮಗಳೂರು: ಜೆಜೆ ನಗರದ ಚಂದ್ರು ಹತ್ಯೆ ಆಗಿದೆ. ಆತನ ತಾಯಿನೇ ಹೇಳಿಕೆ ಕೊಟ್ಟಿದ್ದಾರೆ. ಆದರೂ ಸಹ ಹತ್ಯೆ ವಿಚಾರ ಬಿಟ್ಟು ಬೇರೆ ಎಲ್ಲ ವಿಷಯವೂ ಚರ್ಚೆ ಆಗುತ್ತಲೇ ಇದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಹತ್ಯೆ ಮಾಡಿದ್ದೇ ಒಂದು ತಪ್ಪು. ಅದು ಅಪರಾಧ ಕೂಡ. ಆದರೆ ಇಂತಹ ಮನಸ್ಥಿತಿ ಯಾಕೆ ಬಂತು ? ಇದರ ಬಗ್ಗೆ ಎಲ್ಲರೂ ವಿಚಾರ ಮಾಡಲೇಬೇಕಾಗಿದೆ.
ಸಣ್ಣ ಸಣ್ಣ ವಿಚಾರಗಳಿಗೆ ಅವರೆಲ್ಲ ಯಾಕೆ ಕೆರಳುತ್ತಿದ್ದಾರೆ. ಬೆಂಗಳೂರಿನ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಾಕಿದ್ದು ಯಾಕೆ ? ಹರ್ಷನ ಕೊಲ್ಲುವ ಮನಸ್ಥಿತಿ ಯಾಕೆ ಬಂತು. ಅವರ ರಕ್ತ ಮಾತ್ರ ಕೆಂಪು. ನಮ್ಮದಲ್ಲವೇ ? ಈ ಎಲ್ಲದರ ಬಗ್ಗೆ ನಾವು ಯೋಚನೆ ಮಾಡಲೇಬೇಕಿದೆ ಎಂದು ಸುದ್ದಿಗಾರರಿಗೆ ಹೇಳಿದ್ದಾರೆ ಸಿ.ಟಿ.ರವಿ
PublicNext
11/04/2022 08:07 am