ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಲ್ಲಿದ್ದಾನೆ ಉಗ್ರ ? ಯಾರು ಉಗ್ರ ? ಇದೆಲ್ಲ RSS ಕೆಲಸ !

ಬಾಗಲಕೋಟೆ: ಅಲ್‌ ಖೈದಾ ಉಗ್ರ ಅಯ್ಯಾನ್ ಜವಾಹಿರಿಯ 9 ನಿಮಿಷದ ವೀಡಿಯೋವನ್ನ ಮಾಧ್ಯಮಕ್ಕೆ ಯಾರು ಕಳಿಸಿರೋದು. ಸ್ವತ: ಜವಾಹಿರಿ ಈ ಕೆಲಸ ಮಾಡಿದನೇ ? ಗೊತ್ತಿಲ್ಲ.ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಈ ವಿಚಾರವಾಗಿ ಈಗೊಂದು ಹೇಳಿಕೊಟ್ಟಿದ್ದಾರೆ. ಈ ವೀಡಿಯೋವನ್ನ RSS ನವರೇ ಕಳಿಸಿದ್ದಾರೆ ಎಂದು ದೂರಿದ್ದಾರೆ.

ಆಲೂರು ಎಸ್‌.ಕೆ.ಗ್ರಾಮದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸಿದ್ದರಾಮಯ್ಯ ಮಾತನಾಡಿದ್ದಾರೆ. ಮುಸ್ಕಾನ್ ಹೊಗಳಿದ ಉಗ್ರ ಜವಾಹಿರಿ ವಿಚಾರಕ್ಕೇನೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಇಲ್ಲ..ಇಲ್ಲ. ಇದನ್ನೆಲ್ಲ ಬಿಜೆಪಿಯವರೇ ಹುಟ್ಟುಹಾಕಿರೋದು.

ಎಲ್ಲಿದ್ದಾನೆ ಉಗ್ರ ? ಯಾರು ಈ ಉಗ್ರ ? ಇಂತಹ ವೀಡಿಯೋಗಳನ್ನ RSS ನವರೇ ಕಳಿಸೋದು. ಸಮಾಜದ ಸಾಮರಸ್ಯ ಹಾಳುಮಾಡೋದಕ್ಕೆ. ಸಮಾಜದಲ್ಲಿ ಅಶಾಂತಿ ಹುಟ್ಟುಹಾಕಲಿಲ್ಲ. ಮತಗಿಟ್ಟಿಸಿಕೊಳ್ಳಲಿಕ್ಕೆ RSS ನವರೇ ಇಂತಹ ವೀಡಿಯೋ ಹುಟ್ಟುಹಾಕ್ತಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

Edited By :
PublicNext

PublicNext

07/04/2022 07:34 am

Cinque Terre

49.28 K

Cinque Terre

53

ಸಂಬಂಧಿತ ಸುದ್ದಿ