ಪಾಕಿಸ್ತಾನ್: ನಮ್ಮ ಸರ್ಕಾರ ಉಳಿ ಬೀಳಲು ಅಮೆರಿಕಾನೇ ಕಾರಣ. ಹೀಗಂತ ಪಾಕಿಸ್ತಾನ್ ಹಂಗಾಮಿ ಪ್ರಧಾನಿ ಇಮ್ರಾನ್ ಖಾನ್ ನೇರಾನೇರವಾಗಿಯೇ ದೂರಿದ್ದಾರೆ.
ಪಾಕಿಸ್ತಾನದ ತೆಹ್ರಿಕ್ ಇ ಇನ್ಸಾಫ್ ಈಗ ಪತನಗೊಂಡಿದೆ. ವಿಪಕ್ಷಗಳ ರಾಜಕೀಯ ಮೇಲಾಟದಲ್ಲಿ ಈ ಸರ್ಕಾರ ಬಿದ್ದು ಹೋಗಿದೆ. ಈ ಹಿನ್ನೆಲೆಯಲ್ಲಿಯೇ ಹಂಗಾಮಿ ಪ್ರಧಾನಿ ಇಮ್ರಾನ್ ಖಾನ್ ಕೆಂಡಕಾರಿದ್ದು, ಇಲ್ಲಿವರೆಗೂ ತಮ್ಮ ಸರ್ಕಾರ ಉರುಳಿ ಬೀಳಲು ವಿದೇಶಿ ಷಡ್ಯಂತ್ರ ಎಂದು ಹೇಳುತ್ತಿದ್ದ ಇಮ್ರಾನ್ ಈಗ ನೇರವಾಗಿಯೇ ಹೇಳಿ ಬಿಟ್ಟಿದ್ದಾರೆ.
ಹೌದು. ನಮ್ಮ ಸರ್ಕಾರ ಬಹುಮತ ಕಳೆದುಕೊಳ್ಳುವಲ್ಲಿ, ಅಮೆರಿಕಾದ ಕೈವಾಡ ಇದೆ ಅಂತಲೇ ಇಮ್ರಾನ್ ಖಾನ್ ಈ ನೇರವಾಗಿಯೇ ಆರೋಪ ಮಾಡ್ತಿದ್ದಾರೆ.
PublicNext
04/04/2022 11:32 am