ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಠಕ್ಕೆ ಬಂದರೂ 'ಬೂಟು' ಬಿಚ್ಚದ ಶಾ : ಕಾಂಗ್ರೆಸ್ ಕಿಡಿ

ಬೆಂಗಳೂರು: 2023 ರ ಚುನಾವಣೆಯ ಕಾವು ರಾಜ್ಯದಲ್ಲಿ ಸಣ್ಣನೆ ಶುರುವಾಗಿದೆ. ರಾಜಕೀಯ ಚಟುವಟಿಕೆಗಳು ಗರಿಗೆದ್ದರಿವೆ. ಇದಕ್ಕೆ ಹಸಿ ಉದಾಹರಣೆ ಸಿದ್ದಗಂಗಾ ಮಠಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿಯ ಘಟಾನುಘಟಿ ನಾಯಕರುಗಳ ಭೇಟಿ ಪುಷ್ಟಿ ನೀಡುವಂತಿದೆ.

ಹೌದು ಈ ಭೇಟಿಯ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರತ್ತ ಕಾಂಗ್ರೆಸ್ ಚಾಟಿ ಬೀಸಿದೆ.

ಇನ್ನು ಮಠಕ್ಕೆ ಭೇಟಿ ಕೊಟ್ಟ ವೇಳೆ ಕೇಂದ್ರ ಗೃಹ ಅಮಿತ್ ಶಾ, ಕಾಲಿಗೆ ಧರಿಸಿದ ಬೂಟು ತೆಗೆಯದೆ ಅಗೌರವ ತೋರಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ. ಅಮಿತ್ ಶಾ ಹಾಗೂ ರಾಹುಲ್ ಗಾಂಧಿ ಅವರ ಕಾರ್ಯಕ್ರಮದ ಫೋಟೋಗಳನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ಬಸವಣ್ಣನೆಂದರೆ ವಿನಯವಂತಿಕೆ, ಬಸವಣ್ಣನೆಂದರೆ ಸರಳತೆ, ಬಸವಣ್ಣನಂದರೆ ಗೌರವ! ಗೃಹ ಸಚಿವರು ಸಿದ್ದಗಂಗಾ ಮಠದ ವೇದಿಕೆಯಲ್ಲಿ ಪಾದರಕ್ಷೆ ಧರಿಸಿ ಸ್ವಾಮೀಜಿಯತ್ತ ಪಾದಗಳನ್ನು ತೋರಿಸುತ್ತಿರುವುದು ಎಂತಹ ಉದಾಹರಣೆ ಎಂದಿದೆ.

ಸಂಸ್ಕೃತಿ ಮತ್ತು ಮಠಗಳನ್ನು ಗೌರವಿಸುವುದೆಂದರೆ ಬೂಟುಗಳನ್ನು ತೆಗೆಯುವುದು ಮತ್ತು ನಿಮ್ಮ ಕಾಲಗಳನ್ನು ಸ್ವಾಮೀಜಿ ಕಡೆಗೆ ತೋರಿಸದಿರುವುದು. ನೀವು ಹೊಂದಿರುವ ಸ್ಥಾನ ಅಪ್ರಸ್ತುತ. ಬಸವಣ್ಣ ಅವರ ಮನೆಯಲ್ಲಿ ಎಲ್ಲರೂ ಸಮಾನರು. ಸಿದ್ದಗಂಗಾ ಮಠದಲ್ಲಿ ಗೃಹ ಸಚಿವರ ಈ ಕ್ರಮ ಸ್ವೀಕಾರಾರ್ಹವಲ್ಲ. ನಕಲಿ ಮತ್ತು ಅಸಲಿ ನಂಬಿಕೆಯುಳ್ಳವರ ನಡುವಿನ ವ್ಯತ್ಯಾಸವಿದು ಎಂದು ಕಾಂಗ್ರೆಸ್ ಟೀಕಿಸಿದೆ.

Edited By : Nirmala Aralikatti
PublicNext

PublicNext

03/04/2022 12:00 pm

Cinque Terre

42.19 K

Cinque Terre

19

ಸಂಬಂಧಿತ ಸುದ್ದಿ