ಬೆಂಗಳೂರು: ಪ್ರಸ್ತುತ ರಾಜಕೀಯ ಪರಿಸ್ಥಿತಿ ಅವಲೋಕನ ಬಗ್ಗೆ ಬಿಜೆಪಿ ಕೋರ್ ಕಮಿಟಿಯಲ್ಲಿ ಚರ್ಚೆಯಾಗಿದೆ. ಕಳೆದ ಬಾರಿ ಆದಂತೆ ನಮ್ಮ ಸ್ಥಾನಗಳು 104ಕ್ಕೆ ನಿಲ್ಲಬಾರದು ಎಂದು ಹೇಳಿದ್ದಾರೆ. 104ಸ್ಥಾನ ಇದ್ದಿದ್ದನ್ನು 150ಕ್ಕೆ ತರಲು ಎಲ್ಲ ರೀತಿಯ ಪ್ರಯತ್ನ ಮಾಡಲು ಸಭೆಯಲ್ಲಿ ಸೂಚಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಹುಮತ ಬರಲು ರೋಡ್ ಮ್ಯಾಪ್ ಮಾಡಿದ್ದಾರೆ. ನಮ್ಮ ಪಕ್ಷಕ್ಕೆ ಶಕ್ತಿ ಇರುವ ಕಡೆ ಗೆಲ್ಲುವವರಿಗೆ ಟಿಕೆಟ್ ನೀಡ್ತೀವಿ. ಸರ್ಕಾರದ ಕೆಲಸದ ಬಗ್ಗೆ ಆತ್ಮಾವಲೋಕನ ನಡೆದಿದೆ. ವಿಶ್ವಾಸದ ಆಧಾರದ ಮೇಲೆ ಚರ್ಚೆ ಆಗಿದೆ. ಯಾರನ್ನ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಅಂತ ಪಟ್ಟಿ ಮಾಡಲಾಗ್ತಿದೆ. ಪಂಚ ರಾಜ್ಯದ ಗೆಲುವು ಬಿಜೆಪಿಯ ವಿಶ್ವಾಸ ಹೆಚ್ಚಿಸಿದೆ. ಇದರಿಂದ ಕಾಂಗ್ರೆಸ್ ಆತಂಕಕ್ಕೆ ಒಳಗಾಗಿದೆ. ಬೇರೆ ಬೇರೆ ಪಕ್ಷಗಳಿಂದ ಬರುವವರ ಹೆಸರಿನ ಪಟ್ಟಿ ಸಿದ್ದವಾಗುತ್ತಿದೆ. ಈಗ ಹತಾಶರಾಗಿರುವ ಕಾಂಗ್ರೆಸ್ನ ಕೆಲವರು ಬಿಜೆಪಿ ಕಡೆ ಮುಖ ಮಾಡ್ತಿದ್ದಾರೆ ಎಂದು ಸಿ.ಟಿ ರವಿ ಹೇಳಿದ್ದಾರೆ.
PublicNext
01/04/2022 09:43 pm