ಕೊಲ್ಕತ್ತಾ : ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಗತೀಪರ ಶಕ್ತಿಗಳು ಒಂದಾಗಬೇಕಿದೆ ಎಂದು ದೀದಿ ವಿಪಕ್ಷಗಳ ಎಲ್ಲಾ ನಾಯಕರಿಗೆ ಪತ್ರ ಬರೆದಿದ್ದಾರೆ. ಹೌದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಬಿಜೆಪಿ ಮಣಿಸಲು ಕೈಗೊಳ್ಳಬೇಕಾದ ರೂಪುರೇಷೆಗಳ ಬಗ್ಗೆ ಚರ್ಚಿಸಲು ಸಭೆ ಕರೆಯಿರಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕೇಂದ್ರ ಸರ್ಕಾರ ಚುನಾವಣೆಯ ಸಂದರ್ಭದಲ್ಲಿ ಬೇಕಂತಲೇ ವಿಪಕ್ಷ ನಾಯಕರನ್ನು ಧಮನ ಮಾಡಲೆಂದು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದರ ವಿರುದ್ಧ ನಾವೆಲ್ಲರೂ ಹೋರಾಡಬೇಕಿದೆ ಅದಕ್ಕಾಗಿ ಒಂದು ಸಭೆಯ ಅವಶ್ಯಕತೆ ಇದೆ ಎಂದಿದ್ದಾರೆ.
ಪ್ರಸ್ತುತ ಕೆಲವು ಪಕ್ಷಪಾತದ ರಾಜಕೀಯ ಹಸ್ತಕ್ಷೇಪಗಳಿಂದ ಜನರಿಗೆ ನ್ಯಾಯ ಸಿಗುತ್ತಿಲ್ಲ, ಇದು ನಮ್ಮ ಪ್ರಜಾಪ್ರಭುತ್ವದಲ್ಲಿ ಅಪಾಯಕಾರಿ ಪ್ರವೃತ್ತಿಯಾಗಿದೆ ಎಂದಿದ್ದಾರೆ.
ತೆಲಂಗಾಣದ ಕೆ ಚಂದ್ರಶೇಖರ್ ರಾವ್ ಮತ್ತು ತಮಿಳುನಾಡಿನ ಎಂಕೆ ಸ್ಟಾಲಿನ್ , ದೆಹಲಿ ಮುಖ್ಯಮಂತ್ರ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಸೇರಿದಂತೆ ಬಿಜೆಪಿಯೇತರ ಮುಖ್ಯಮಂತ್ರಿಗಳಿಗೆ ಮಮತಾ ಬ್ಯಾನರ್ಜಿ ಪತ್ರ ಬರೆದಿದ್ದಾರೆ. ದಿನದಿಂದ ದಿನಕ್ಕೆ ಪಶ್ಚಿಮ ಬಂಗಾಳದಲ್ಲಿ ಅಹಿತರಕ ಘಟನೆಗಳು ಹೆಚ್ಚುತ್ತಲಿದ್ದು ಇಂತಹ ಘಟನೆಗಳ ವಿರುದ್ಧ ಬಿಜೆಪಿ ಸೂಕ್ತ ಕ್ರಮಕ್ಕೆ ಮುಂದಾಗಿ ಉನ್ನತ ಮಟ್ಟದಲ್ಲಿ ತನಿಖೆಗೆ ಮುಂದಾಗುತ್ತಿದೆ.
PublicNext
29/03/2022 05:54 pm