ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೀವು ದಿನದ 30 ಗಂಟೆ ದುಡಿಯಬೇಕು: ಸಿಎಂ ಕೇಜ್ರಿವಾಲ್ ಮಾತಿಗೆ ಪಂಜಾಬ್‌ ಮಂತ್ರಿಗಳು ತಬ್ಬಿಬ್ಬು.!

ಅಮೃತ್‌ಸರ: ಪಂಜಾಬ್‌ನಲ್ಲಿ ಭರ್ಜರಿ ಗೆಲುವಿನೊಂದಿಗೆ ಆಮ್‌ ಆದ್ಮಿ ಪಕ್ಷದ ಭಗವಂತ್ ಮಾನ್‌ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇನ್ನು ಭರ್ಜರಿ ಗೆಲುವಿನ ಉತ್ಸಾಹದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪಂಜಾಬ್‌ನ ಹೊಸ ಸಚಿವರಿಗೆ ಕೆಲವೊಂದು ಟಾಸ್ಕ್‌ ಕೊಟ್ಟಿದ್ದಾರೆ.

'ಪಂಜಾಬ್‌ನ ಘಟಾನುಘಟಿಗಳನ್ನು ಸೋಲಿಸಿ ಯಶಸ್ಸು ಗಳಿಸಿರುವ ನಿಮಗೆಲ್ಲಾ ಅಭಿನಂದನೆಗಳು. ಪಂಜಾಬ್‌ನ ಬೆಳವಣಿಗೆ ಕುರಿತು ಇಡೀ ದೇಶದಲ್ಲಿ ಚರ್ಚೆಯಾಗುತ್ತಿದೆ. ಇದು ಶ್ಲಾಘನಾರ್ಹ ಕಾರ್ಯವಾಗಿದೆ. ನೂತನ ಮುಖ್ಯಮಂತ್ರಿ ಮಾನ್‌ ಅವರು ಅಧಿಕಾರ ಸ್ವೀಕರಿಸಿ ಮೂರೇ ದಿನಗಳಲ್ಲಿ ಹಲವಾರು ಕಾರ್ಯಗಳನ್ನು ಹಮ್ಮಿಕೊಂಡಿದ್ದು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ ಎಂದು ಶ್ಲಾಘಿಸಿದರು.

ಪಂಜಾಬ್‌ನ ನೂತನ ಸಚಿವರನ್ನು ಉದ್ದೇಶಿಸಿ ಮಾತನಾಡುವ ಭರದಲ್ಲಿ ಸಿಎಂ ಕೇಜ್ರಿವಾಲ್, ನೀವೆಲ್ಲರೂ ದಿನದ 30 ಗಂಟೆ ದುಡಿಯಬೇಕು. ಹೀಗಾದರೆ ಮಾತ್ರ ಜನರ ಆಶಯಗಳನ್ನು ಈಡೇರಿಸಲು ಸಾಧ್ಯ ಎಂದರು. ಕೇಜ್ರಿವಾಲ್ ಅವರ ಈ ಮಾತಿಗೆ ನೂತನ ಸಚಿವರು ಅರೆಕ್ಷಣ ಕಕ್ಕಾಬಿಕ್ಕಿಯಾದರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಒಂದು ದಿನ ಅಂದ್ರೆ 24 ಗಂಟೆ ಸರ್ ಎಂದು ಕಮೆಂಟ್ ಮಾಡಿದ್ದಾರೆ.

Edited By : Vijay Kumar
PublicNext

PublicNext

21/03/2022 10:17 pm

Cinque Terre

47.7 K

Cinque Terre

13

ಸಂಬಂಧಿತ ಸುದ್ದಿ