ಹೈದ್ರಾಬಾದ್: ಭಾರತೀಯ ಸೇನೆಗೆ ನೀರು ಮತ್ತು ವಿದ್ಯುತ್ ಪೂರೈಕೆಯನ್ನ ನಿಲ್ಲಿಸಿ ಬಿಡುತ್ತೇನೆ ಎಂದು ತೆಲಂಗಾಣ ಪೌರಾಡಳಿತ ಸಚಿವ ಕೆ.ಟಿ.ರಾಮ್ ರಾವ್ ಎಚ್ಚರಿಕೆ ಕೊಟ್ಟಿದ್ದಾರೆ.
ಭಾರತೀಯ ಸೇನೆ ಕಾರಣವೇ ಇಲ್ಲದೇ ಸಾರ್ವಜನಿಕ ರಸ್ತೆಗಳನ್ನ ಮುಚ್ಚುತ್ತಿದೆ. ಇದರಿಂದ ದಂಡ ಪ್ರದೇಶದ ಬಳಿ ಇರೋ ನಿವಾಸಿಗಳಿಗೆ ತೊಂದರೆ ಆಗುತ್ತಿದೆ. ಇದು ಹೀಗೆ ಮುಂದುವರೆದರೆ ಸೇನೆಗೆ ಪೂರೈಕೆ ಆಗೋ ನೀರು ಮತ್ತು ವಿದ್ಯುತ್ ನಿಲ್ಲಿಸುವುದಾಗಿಯೇ ಸಚಿವ ರಾವ್ ರಾಮ್ ಆವಾಜ್ ಹಾಕಿದ್ದಾರೆ.
ಸೇನೆಯು ನಾಲೆಯೊಂದರ ಮೇಲೆ ಚಕ್ ಡ್ಯಾಮ್ ನಿರ್ಮಿಸಲು ಸೇನಾಧಿಕಾರಿಗಳು ನಿರ್ಧರಿಸಿದ್ದಾರೆ. ಇದರಿಂದ ನಿವಾಸಿಗಳಿಗೆ ತೊಂದರೆ ಆಗುತ್ತದೆ. ಅವರು ಈಗಾಗಲೇ ಆತಂಕದಲ್ಲೂ ಇದ್ದಾರೆ ಅಂತಲೇ ಸಚಿವ ರಾಮ್ ರಾವ್ ಹೇಳಿದ್ದಾರೆ.
PublicNext
14/03/2022 07:57 am