ನವದೆಹಲಿ: ಮಾಜಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪನವರ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನ ಭೇಟಿ ಮಾಡಿದ್ದಾರೆ.
ರಾಜ್ಯದ ಬಿಜೆಪಿ ಪಕ್ಷದ ಮತ್ತು ಸರ್ಕಾರದ ಸಂಪುಟದಲ್ಲಿ ಒಂದಷ್ಟು ಬದಲಾವಣೆಗಳು ಆಗೋ ಸಾಧ್ಯತೆ ಇದೆ. ಈ ಬದಲಾವಣೆ ಪಂಚ ರಾಜ್ಯದ ಚುನಾವಣೆ ಬಳಿಕವೇ ಆಗುತ್ತದೆ ಅನ್ನೋ ವದಂತಿ ಇದೆ. ಈ ಹಿನ್ನೆಲೆಯಲ್ಲಿಯೇ ನಡ್ಡಾ ಅವರ ವಿಜಯೇಂದ್ರ ಭೇಟಿ ಈಗಲೇ ಕುತೂಹಲ ಮೂಡಿಸಿದೆ.
ಯಡಿಯೂರಪ್ಪ ತಮ್ಮ ಸ್ಥಾನದಿಂದ ಇಳಿದ ಬಳಿಕ ಪುತ್ರ ವಿಜಯೇಂದ್ರ ಅವರಿಗೆ ಸರ್ಕಾರದಲ್ಲಿ ಒಂದು ಸ್ಥಾನ ಕಲ್ಪಿಸಬೇಕು ಎಂಬ ಕೂಗು ಅವರ ಬೆಂಬಲಿಗರಿಂದ ಕೇಳಿ ಬರ್ತಾನೇ ಇತ್ತು. ಅದರಂತೆ ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ಒಲವು ತೋರಿದ್ದರು. ಪಕ್ಷದ ನಾಯಕರು ಹಾಗೂ ವರಿಷ್ಠರು ಒಪ್ಪಿದಲ್ಲಿ ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ಸಿಗೋ ಚಾನ್ಸ್ ಜಾಸ್ತಿ ಇದೆ.
PublicNext
10/03/2022 07:21 am