ನವದೆಹಲಿ: ಬೇಗ, ಬೇಗ ನಿಮ್ಮ ವಾಹನಗಳ ಟ್ಯಾಂಕರ್‌ಗಳಲ್ಲಿ ಪೆಟ್ರೋಲ್,ಡೀಸೆಲ್ ತುಂಬಿಸಿಕೊಂಡು ಬಿಡಿ. ಮೋದಿ ಸರ್ಕಾರದ ಆಫರ್ ಇನ್ನೇನೂ ಮುಗೀತಾ ಬಂತು. ಪಂಚರಾಜ್ಯದ ಚುನಾವಣೆ ಮುಗಿಯುದ್ದಂತೇನೆ ತೈಲ ದರ ಗಗನಕ್ಕೇರುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ,ಮೋದಿ ಸರ್ಕಾರವನ್ನ ಕಟುವಾಗಿಯೇ ಟೀಕಿಸಿದ್ದಾರೆ.
ಸೋಮವಾರ ಉತ್ತರ ಪ್ರದೇಶದ ಕಟ್ಟ ಕಡೆಯ 7ನೇ ಹಂತದ ಚುನಾವಣೆ ಆಗುತ್ತದೆ. ಅದಾದ ಬಳಿಕ ಮಾರ್ಚ್-10ಕ್ಕೆ ಫಲಿತಾಂಶವೂ ಬರುತ್ತದೆ. ಅಲ್ಲಿಗೆ ಮೋದಿ ಆಫರ್ ಎಂಡ್ ಆಗುತ್ತದೆ ಅಂತಲೇ ರಾಹುಲ್ ಗಾಂಧಿ ಚುಚ್ಚಿದ್ದಾರೆ.
ಉಕ್ರೇನ್ ಮತ್ತು ರಷ್ಯಾ ಯುದ್ಧದ ನಡೆಯುತ್ತಿದೆ. ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿಯ ತೈಲ ಬೆಲೆ ಏರಿಕೆ ಆಗೋ ಭೀತಿ ಇದೆ. ಆದರೂ ಸಹ ರಾಜ್ಯಗಳಲ್ಲಿ ತೈಲ ದರ ಹಾಗೇ ಮುಂದುವರೆದಿದೆ. ಕಾರಣ ಚುನಾವಣೆ ತಂತ್ರ. ಅದಕ್ಕೇನೆ ಚುನಾವಣೆ ಮುಗಿಯೋ ಮುಂಚೇನೆ ಪೆಟ್ರೋಲ್ ಟ್ಯಾಂಕ್ ತುಂಬಿಸಿಕೊಳ್ಳಿ ಅಂತಲೇ ರಾಹುಲ್ ವ್ಯಂಗ್ಯವಾಡಿದ್ದಾರೆ.
PublicNext
06/03/2022 02:10 pm