ದಾವಣಗೆರೆ: ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಅವರನ್ನು ಕಂದಾಯ ಸಚಿವ ಆರ್. ಅಶೋಕ್ ಹಾಡಿ ಹೊಗಳಿದ್ದಾರೆ.
ಹೊನ್ನಾಳಿ ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಿದ್ದ ಆರ್. ಅಶೋಕ್ ಅವರು, ಕಸದಿಂದ ರಸ ಮಾಡೋದು ರೇಣುಕಾಚಾರ್ಯರ ಗುಣ ಎಂದು ಶ್ಲಾಘಿಸಿದರು.
ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನಲ್ಲಿ ನೂತನ ಕಂದಾಯ ಉಪ ವಿಭಾಗ ಉಪ ವಿಭಾಗಾಧಿಕಾರಿಗಳ ಕಚೇರಿ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ವೇಳೆ ಮಾತನಾಡಿದ ಅವರು ರೇಣುಕಾಚಾರ್ಯ ಅವರಿಗೆ ಅಭಿನಂದನೆ ಸಲ್ಲಿಸಿದರು. ರೇಣುಕಾಚಾರ್ಯ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಶುಭಾಶಯವನ್ನೂ ಕೋರಿದರು.
ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಆಗುವುದಿಲ್ಲ ಎನ್ನುವ ಕೆಲಸಗಳನ್ನು ಮಾಡುವ ಜಾಣ್ಮೆ ಹೊಂದಿದ್ದಾರೆ.ತಮ್ಮ ಕ್ಷೇತ್ರಕ್ಕೆ ಬೇಕಾದ ಕೆಲಸಗಳನ್ನು ಪಟ್ಟುಹಿಡಿದು ಮಾಡಿಸಿಕೊಳ್ಳುತ್ತಾರೆ. ನಾನು ವಿವಿಧ ಇಲಾಖೆಯಲ್ಲಿ ಸಚಿವನಾಗಿದ್ದಾಗ ಈ ಕ್ಷೇತ್ರಕ್ಕೆ ಬಹಳಷ್ಟು ಅನುಕೂಲ ಆಗಿವೆ. ರೇಣುಕಾಚಾರ್ಯರ ಶಾಸಕರಾಗಿರುವ ಅವಧಿಯಲ್ಲಿ ಹೊನ್ನಾಳಿ-ನ್ಯಾಮತಿ ತಾಲೂಕಿಗೆ ಸಾಕಷ್ಟು ಅನುದಾನ ಹರಿದು ಬಂದಿದೆ. ಯಾವ ಶಾಸಕರು ಇಷ್ಟೊಂದು ಆಸಕ್ತಿ ವಹಿಸಿ ಕೆಲಸ ಮಾಡಿಲ್ಲ. ಇಂತಹ ಶಾಸಕರು ಸಿಗುವುದು ಕಷ್ಟ. ಅವರಿಗೆ ನಿಮ್ಮ ಆಶೀರ್ವಾದ ಅಗತ್ಯ ಎಂದರು.
PublicNext
28/02/2022 04:31 pm