ಉಕ್ರೇನ್; ಇಡೀ ದೇಶ ಹೊತ್ತಿ ಉರಿಯುತ್ತಿದೆ. ಸರ್ಕಾರ ಕೂಡ ಯದ್ಧಕ್ಕೆ ಸನ್ನದ್ಧರಾಗಿ ಅಂತಲೇ ಹೇಳಿದೆ. ಅದರ ಮಧ್ಯೆ ಇಲ್ಲಿಯ ಸಂಸದೆಯೊಬ್ಬರು ರಷ್ಯಾ ಸೇನೆ ವಿರುದ್ಧ ಹೋರಾಡಲು ಸಜ್ಜಾಗಿದ್ದಾರೆ. ಕೈಯಲ್ಲಿ ಬಂದೂಕು ಹಿಡಿದು ರಕ್ಷಣೆಗೆ ನಿಂತು ಬಿಟ್ಟಿದ್ದಾರೆ.
ಹೌದು. ಉಕ್ರೇನ್ ದೇಶದ ಈ ಸಂಸದೆ ಹೆಸರು ಕೈರಾ ರೂಢಿಕ್. ರಷ್ಯಾ ಸೇನೆಯ ವಿರುದ್ಧ ಸಮರಕ್ಕಿಳಿದು ಜನರ ರಕ್ಷಣೆಗಾಗಿಯೇ ಟೊಂಕ ಕಟ್ಟಿ ನಿಂತು ಬಿಟ್ಟಿದ್ದಾರೆ.
ಉಕ್ರೇನ್‌ನ ವಾಯ್ಸ್ ಪಾರ್ಟಿಯಿಂದಲೇ ಕೈರಾ ರೂಢಿಕ್ ಸಂಸದೆ ಆಗಿದ್ದಾರೆ. ರೈಫಲ್ ಹಿಡಿದು ನಿಂತಿರೋ ಒಂದು ಫೋಟೋವನ್ನ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲೂ ಹಂಚಿಕೊಂಡಿದ್ದಾರೆ. ಅದು ಈಗ ಎಲ್ಲರ ಗಮನ ಸೆಳೆಯುತ್ತಲೇ ಇದೆ.
PublicNext
28/02/2022 01:58 pm