ಬೆಂಗಳೂರು: ಸಚಿವ ಕೆ. ಎಸ್ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಶಾಸಕರು ಸದನದಲ್ಲಿ ಅಹೋರಾತ್ರಿ ಹೋರಾಟ ಹಮ್ಮಿಕೊಂಡಿದ್ದಾರೆ. ಈ ಹೋರಾಟ ನಿನ್ನೆ ಶುಕ್ರವಾರ ಎರಡನೇ ದಿನಕ್ಕೆ ಕಾಲಿರಿಸಿದ್ದು, ಕೈ ಶಾಸಕರು ರಾತ್ರಿ ಊಟ ಮುಗಿಸಿಕೊಂಡು ಸದನದೊಳಗೆ ಕೆಲಕಾಲ ಹರಟೆ ಹೊಡೆದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಸಚಿವ ಈಶ್ವರಪ್ಪ ವಿರುದ್ಧ ಪ್ರತಿಭಟನೆ ಕೈಗೊಂಡ ಕಾಂಗ್ರೆಸ್ ಶಾಸಕರು ಘೋಷಣೆ ಕೂಗಿದರು. ನಂತರ ಮೊಗಸಾಲೆಯಲ್ಲಿ ಕುಳಿತು ಅಂತ್ಯಾಕ್ಷರಿ ಸ್ಪರ್ಧೆ ಏರ್ಪಡಿಸಿ ಕೆಲವು ಹಿಂದಿ ಹಾಡು ಹಾಗೂ ಕನ್ನಡ ಸಿನಿಮಾಗಳ ಹಳೆಯ ಹಾಡುಗಳನ್ನು ಹಾಡಿ ಆನಂದಿಸಿದ್ದಾರೆ.
PublicNext
19/02/2022 01:30 pm