ಬೆಂಗಳೂರು : ಚರ್ಚಿಸಬೇಕಾದ ಸಾವಿರ ವಿಚಾರಗಳ ಮಧ್ಯೆ ಫೆ.16 ರಿಂದ ವಿಧಾನ ಸಭೆಯಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವುದಾಗಿ ನೀಡಿದ ಹೇಳಿಕೆಯ ಹಗ್ಗಾ ಜಗ್ಗಾಟ ಮುಂದುವರೆದಿದೆ. ಇದೇ ವಿಚಾರಕ್ಕೆ ಈಶ್ವರಪ್ಪ ಮತ್ತು ಡಿಕೆಶಿ ಬುಧವಾರ ಪರಸ್ಪರ ವಾಗ್ದಾಳಿ ನಡೆಸುತ್ತಲೇ ನಿನ್ನೆಯ ಕಾಲಾಪವನ್ನು ಇಂದಿಗೆ ಸ್ಪೀಕರ್ ಕಾಗೇರಿ ಮುಂದೂಡಿದ್ದರು.
ಇಂದು ಕೂಡಾ ವಿರೋಧ ಪಕ್ಷದವರು ಈಶ್ವರಪ್ಪ ರಾಜೀನಾಮೆ ಒತ್ತಾಯಿಸಿ ಸದನದ ಬಾವಿಗಿಳಿದು ಹೋರಾಟ ಆರಂಭಿಸಿದ್ದಾರೆ. ಹಾಗಾಗಿ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ. ಇನ್ನು ಕಾಂಗ್ರೆಸ್ ಅಹೋರಾತ್ರಿ ಧರಣಿ ನಡೆಸುವ ಉದ್ದೇಶದಿಂದ ಸದನದಲ್ಲಿಯೇ ಠಿಕಾಣೆ ಹೊಡಿದೆ.
PublicNext
17/02/2022 04:23 pm