ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಶಾಸಕ ತನ್ವೀರ್ ಸೇಠ್ ತಾತ ಕೂಡ ಹಿಂದೂ ಆಗಿದ್ದರು: ಸಂಸದ ಪ್ರತಾಪ್ ಸಿಂಹ

ಮೈಸೂರು: ಹೌದು ಇದು ನಮ್ಮ ತಾತನದ್ದೇ ದೇಶ. ನಿಮ್ಮ ತಾತ ಕೂಡ ಹಿಂದೂ ಆಗಿದ್ದರು. ಯಾರೋ ಖಡ್ಗ ಹಿಡಿದುಕೊಂಡು, ದಬ್ಬಾಳಿಕೆ ನಡೆಸಿ ಮತಾಂತರ ನಡೆಸಿದ್ದಕ್ಕೆ ನೀವು ಮುಸ್ಲಿಂ ಆಗಿದ್ದೀರಿ ಎಂದು ಸಂಸದ ಪ್ರತಾಪ್ ಸಿಂಹ ಅವರು ಶಾಸಕ ತನ್ವೀರ್ ಸೇಠ್‌ಗೆ ಟಾಂಗ್ ಕೊಟ್ಟಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ದೇಶ ನಿಮ್ಮ ತಾತನದ್ದಾ? ಎಂಬ ಶಾಸಕ ತನ್ವೀರ್ ಸೇಠ್ ಹೇಳಿಕೆಗೆ ತನ್ವೀರ್ ಸೇಠ್ ಅವರ ಪೂರ್ವಜರು ಮೆಕ್ಕಾ, ಮದೀನಾದಿಂದ ಬಂದವರಲ್ಲ. ಇಲ್ಲೇ ಹುಟ್ಟಿ, ಇಲ್ಲೇ ಬೆಳೆದು ಮತಾಂತರಗೊಂಡವರು.

ಇದೆಲ್ಲವನ್ನೂ ತನ್ವೀರ್ ಸೇಠ್ ಅರ್ಥ ಮಾಡಿಕೊಂಡು ಮಾತನಾಡಬೇಕು. ಅವರ ಪೂರ್ವಜರು ಹಿಂದೂ ಧರ್ಮದಿಂದ ಮಾತಾಂತರ ಆಗಿದ್ದಕ್ಕೆ ಇವರು ತನ್ವೀರ್ ಸೇಠ್ ಆಗಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

Edited By : Shivu K
PublicNext

PublicNext

06/02/2022 12:53 pm

Cinque Terre

75.99 K

Cinque Terre

21

ಸಂಬಂಧಿತ ಸುದ್ದಿ