ಕೊಪ್ಪಳ: ದಿಲ್ಲಿಯಿಂದ ಗಲ್ಲಿವರೆಗೂ ರಾಜಕೀಯ ಎಂಬುದು ಕೆಟ್ಟು ಹೋಗಿದೆ. ಜನ ಕೆಟ್ಟಿಲ್ಲ. ಬದಲಾಗಿ ಲೀಡರ್‌ಗಳು ಕೆಟ್ಟಿದ್ದಾರೆ. ವಿಧಾನಸೌಧ, ಪಾರ್ಲಿಮೆಂಟ್ ಕೆಟ್ಟಿದೆ ಎಂದು ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆ ಕುಕನೂರು ಪಟ್ಟಣ ಪಂಚಾಯಿತಿಗೆ ಆಯ್ಕೆಯಾದ ಸದಸ್ಯರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾರ್ಲಿಮೆಂಟ್ ಕೆಟ್ಟಿದೆ, ವಿಧಾನಸೌಧ ಕೆಟ್ಟಿದೆ. ಇವೆರಡು ಕೆಟ್ಟಿರೋದಕ್ಕೆ ಜನ ಕೆಟ್ಟಿದ್ದಾರೆ ಎಂದಿದ್ದಾರೆ. ಎಲ್ಲಾ ಕಡೆ ಇವತ್ತು ಹಣ ಇದ್ದವನೇ ಚುನಾವಣೆಗೆ ಬರಬೇಕು. ಅಥವಾ ಜಾತಿ ಇದ್ದವನು ರಾಜಕೀಯಕ್ಕೆ ಬರಬೇಕು ಎಂಬಂತಾಗಿದೆ. ಹಣ, ಜಾತಿ ಮುಂದೆ ವಿಚಾರವಂತರು ಡೌನ್ ಆಗಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯ ಎಂದು ರಾಯರೆಡ್ಡಿ ಹೇಳಿದ್ದಾರೆ.
ಗಣಿ ಸಚಿವ ಹಾಲಪ್ಪ ಆಚಾರ್ನನ್ನು RDCC ಅಧ್ಯಕ್ಷ ಮಾಡಿದ್ದು ನಾನೇ. ನನಗೆ ಸಹಕಾರ ಕ್ಷೇತ್ರದಲ್ಲಿ ಏನೂ ಗೊತ್ತಿರಲಿಲ್ಲ. ಹೀಗಾಗಿ ನಾನು ಹಾಲಪ್ಪನನ್ನು ಅಧ್ಯಕ್ಷನನ್ನಾಗಿ ಮಾಡಿದ್ದೇನೆ. ಹಾಲಪ್ಪ ಆಚಾರ್ ಎಲ್ಲೂ ನನ್ನ ಹೆಸರು ಹೇಳಿಲ್ಲ ಎಂದ ರಾಯರೆಡ್ಡಿ ಅನೇಕರನ್ನು ವಿರುದ್ಧ ಹಾಕಿಕೊಂಡು ಅಧ್ಯಕ್ಷ ಮಾಡಿದ್ದು ನಾನು. ಒಮ್ಮೊಮ್ಮೆ ನಾವು ಫೇಲ್ ಆಗ್ತೀವಿ, ಇಂತಹ ತಪ್ಪು ಜನರನ್ನ ಬೆಳಸಿದ್ದೇವೆ. ಹಾಲಪ್ಪ ಹಣ್ಣಿನ ಗಿಡ ಆಗಲಿಲ್ಲ,ಬದಲಾಗಿ ಜಾಲಿ ಗಿಡ ಆಗಿದ್ದಾರೆ ಎಂದ ಬಸವರಾಜ್ ರಾಯರೆಡ್ಡಿ , ಸಚಿವ ಹಾಲಪ್ಪ ಆಚಾರ್ ವಿರುದ್ಧ ವಾಗ್ದಾಳಿ ನಡೆಸಿದರು.
PublicNext
31/01/2022 09:49 am