ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಂಗ್ರೆಸ್ ಪರಿಸ್ಥಿತಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ: ಆರ್ ಅಶೋಕ್

ಬೆಂಗಳೂರು: ಕಾಂಗ್ರೆಸ್ ಪಕ್ಷದ ಸದ್ಯದ ಸ್ಥಿತಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊನ್ನೆ ಸಿದ್ದರಾಮಯ್ಯ ಹೇಳಿದ್ರು ನನ್ನ ಸಂಪರ್ಕದಲ್ಲಿ 20 ಜನ ಇದಾರೆ ಅಂತ. ಡಿ.ಕೆ ಶಿವಕುಮಾರ್ ಒಂದು ಹೆಜ್ಜೆ ಮುಂದೆ ಹೋಗಿ ನನ್ನ ಸಂಪರ್ಕದಲ್ಲಿ ಮಂತ್ರಿಗಳಿದ್ದಾರೆ ಎಂದು ಹೇಳಿದರು. ಆದ್ರೆ ಸಿಎಂ ಇಬ್ರಾಹಿಂ ಅವರ ನಿರ್ಧಾರದಿಂದಾಗಿ ಅವರ ಮನೆಯ ದಿಡ್ಡಿ ಬಾಗಿಲೆ ಕಿತ್ತುಕೊಂಡು ಹೋಗಿದೆ ಎಂದು ವ್ಯಂಗ್ಯವಾಡಿದರು.

ಸಿಎಂ ಇಬ್ರಾಹಿಂ ಅವರು ಸಿದ್ದರಾಮಯ್ಯ ಅವರನ್ನು ಪಾರ್ಟಿಗೆ ತರುವ ಕೆಲಸ, ಮುಖ್ಯಮಂತ್ರಿಯಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿ ಸಿದ್ದರು. ಈಗ ಸಿ ಎಂ ಇಬ್ರಾಹಿಂ ಅವರೇ ಪಾರ್ಟಿ ಬಿಟ್ಟಿದ್ದಾರೆ. ಅವರ ಪಾರ್ಟಿಯೇ ಮನೆಯೊಂದು ಮೂರು ಬಾಗಿಲಾಗಿದೆ. ಶಿವಕುಮಾರ್ ಲೀಡರ್ ಅಲ್ಲ, ನನಗೆ ಸಿದ್ದರಾಮಯ್ಯ ಲೀಡರ್ ಎಂದು ಇಬ್ರಾಹಿಂ ಹೇಳಿದ್ದರು. ಆದ್ರೆ ಅವರೇ ನನಗೆ ದ್ರೋಹ ಬಗೆದರು ಎಂದಿದ್ದಾರೆ. ಅಂದ ಮೇಲೆ ಕಾಂಗ್ರೆಸ್ ಗೆ ಉಳಿಗಾಲ ಇನ್ನಿಲ್ಲ ಎಂದು ಸಚಿವ ಆರ್ ಅಶೋಕ್ ಟೀಕಿಸಿದ್ದಾರೆ.

Edited By : Nagaraj Tulugeri
PublicNext

PublicNext

28/01/2022 06:39 pm

Cinque Terre

63.9 K

Cinque Terre

4