ಕಲಬುರಗಿ : ಕೊಳೆತು ಹೋಗಿರುವ ಮಾವಿನ ಹಣ್ಣನ್ನು ಯಾರಾದ್ರೂ ಖರೀದಿ ಮಾಡ್ತಾರಾ..? ಮಾಜಿ ಸಿಎಂ ಸಿದ್ದರಾಮಯ್ಯಗೆ ಸಚಿವ ಕೆ.ಎಸ್ ಈಶ್ವರಪ್ಪ ಕೊಟ್ಟ ಟಾಂಗ್ ಕೊಟ್ಟಿದ್ದಾರೆ.
ಬಿಜೆಪಿ ಶಾಸಕರು, ಸಚಿವರು ಸಂಪರ್ಕದಲ್ಲಿದ್ದಾರೆಂಬ ಸಿದ್ದರಾಮಯ್ಯ ಹೇಳಿಕೆ ಹಿನ್ನೆಲೆಯ್ಲಲಿ ಪ್ರತಿಕ್ರಿಯಿಸಿದ ಈಶ್ವರಪ್ಪ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಕೊಳೆತು ನಾರುತ್ತಿದೆ ಎಂದು ಲೇವಡಿ ಮಾಡಿದರು.
ಮಾತ್ರವಲ್ಲದೆ ಕಾಂಗ್ರೆಸ್ ಕೊಳೆತ ಮಾವು, ಮೋದಿ ಫ್ರೆಶ್ ಆ್ಯಪಲ್ ಎಂದಿದ್ದ ಮಾತಿಗೆ ಕಲಬುರಗಿಯಲ್ಲಿ ತಿರುಗೇಟು ಕೊಟ್ಟ ಶಾಸಕ ಪ್ರಿಯಾಂಕ್ ಖರ್ಗೆ ಮತ್ತೆ ರಾಜ್ಯದಲ್ಲಿ ಯಡಿಯೂರಪ್ಪ ಅವರನ್ನು ಬದಲಾಯಿಸಿದ್ದು ಏಕೆ ? ಯಡಿಯೂರಪ್ಪ ಕೊಳೆತ ಹಣ್ಣು ಅಂತಾನೆ ಬದಲಾಯಿಸಿದ್ರಾ ?
ಈಗ ಬೊಮ್ಮಾಯಿ ಸಹ ಕೊಳೆತ ಹಣ್ಣು ಅಂತ ಬದಲಾಯಿಸಲು ಮುಂದಾಗ್ತಿದಿರಾ ? ಇತ್ತಿಚಿನ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಮುಂದಿದೆ. ಹಾಗಾದ್ರೆ ರಾಜ್ಯದಲ್ಲಿ ಬಿಜೆಪಿ ಆಡಳಿತ ಕೊಳೆತಿದೆಯಾ ? ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ನನ್ನ ಪತ್ರಕ್ಕೆ ಕಿಮ್ಮತ್ತಿಲ್ಲ ಎಂದಿದ್ದಾರೆ ಹಾಗಾದ್ರೆ ಬಿಜೆಪಿ ಆಡಳಿತ ಸರಿಯಿಲ್ಲ ಎಂದು ಬಿಜೆಪಿಯವರೇ ಒಪ್ಪಿಕೊಂಡಂತೆ ಅಲ್ವಾ ? ನಾವು ಕೊಳೆತ ಹಣ್ಣು ಅಲ್ಲ ಎವರ್ ಗ್ರೀನ್ ಎವರ್ ಫ್ರೆಶ್. ಯಾರು ಕೊಳೆತ ಹಣ್ಣು, ಯಾರು ಫ್ರಶ್ ಎನ್ನುವುದು ಚುನಾವಣೆ ಬರಲಿ ಗೊತ್ತಾಗುತ್ತೆ ಎಂದಿದ್ದಾರೆ.
PublicNext
27/01/2022 05:39 pm