ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಲಾಂ ನಬಿ ಆಝಾದ್ ಸೇವೆಯನ್ನು ಕಾಂಗ್ರೆಸ್ ಗುರುತಿಸಿಲ್ಲ: ಕಪಿಲ್ ಸಿಬಲ್

ನವದೆಹಲಿ: ಕಾಂಗ್ರೆಸ್‌ಗೆ ಗುಲಾಂ ನಬಿ ಆಝಾದ್ ಅವರ ಸೇವೆಯ ಅಗತ್ಯವಿಲ್ಲ. ಅವರು ಮಾಡಿದ ಕಾರ್ಯಗಳನ್ನು ಕಾಂಗ್ರೆಸ್ ಗುರುತಿಸಿಲ್ಲ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಹೇಳಿದ್ದಾರೆ‌.

ಹಿರಿಯ ಕಾಂಗ್ರೆಸ್ಸಿಗ ಗುಲಾಂ ನಬಿ ಆಝಾದ್ ಅವರು ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆ ಆದ ನಂತರ ಪ್ರತಿಕ್ರಿಯೆ ನೀಡಿದ ಅವರು ಈ ಹೇಳಿಕೆ ನೀಡಿದ್ದಾರೆ.

ಗುಲಾಂ ನಬಿ ಆಝಾದ್ ಅವರಿಗೆ ಅಭಿನಂದನೆ ಸಲ್ಲಿಸಿರುವ ಕಪಿಲ್ ಸಿಬಲ್, ಆಝಾದ್ ಅವರ ಸೇವೆಗಳನ್ನು ಕಾಂಗ್ರೆಸ್ ಪಕ್ಷವೇ ಗುರುತಿಸಿಲ್ಲ. ಅವರ ಸಮಾಜಪರ ಕೆಲಸಗಳನ್ನು ರಾಷ್ಟ್ರ ಗುರುತಿಸಿದೆ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಅವರ ಸೇವೆಯ ಅಗತ್ಯತೆ ಇಲ್ಲ ಎನಿಸುತ್ತದೆ. ಇದು ವಿಪರ್ಯಾಸ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

26/01/2022 04:26 pm

Cinque Terre

52.68 K

Cinque Terre

3

ಸಂಬಂಧಿತ ಸುದ್ದಿ