ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಮಾಜವಾದಿ ಪಕ್ಷ ಸೇರಿದ ಭಾರತದ ಅತಿ ಎತ್ತರದ ವ್ಯಕ್ತಿ ಧರ್ಮೇಂದ್ರ ಸಿಂಗ್

ನವದೆಹಲಿ:ಭಾರತದ ಅತಿ ಎತ್ತರದ ಮನುಷ್ಯ ಈಗ ರಾಜಕೀಯ ಪಕ್ಷವೊಂದನ್ನ ಸೇರಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿಯೇ ರಾಜಕೀಯ ಪಕ್ಷದವ್ರು ಈ ವ್ಯಕ್ತಿಯನ್ನ ಅಪ್ರೋಚ್ ಮಾಡಿದ್ದಾರೆ. ಅಂದ್ಹಾಗೆ ಅದ್ಯಾವ ಪಕ್ಷ. ಯಾರ ಆ ಎತ್ತರದ ಮನುಷ್ಯ.ಎಲ್ಲವನ್ನೂ ಹೇಳ್ತೀವಿ ನೋಡಿ.

ಹೌದು ಭಾರತ ಎತ್ತರದ ಮನುಷ್ಯನ ಹೆಸರು ಧರ್ಮೇಂದ್ರ ಪ್ರತಾಪ್ ಸಿಂಗ್. ಮೂಲತಃ ಪ್ರತಾಪಗಢ್‌ನವರು. ಬರೊಬ್ಬರಿ 8.1 ಅಡಿ ಎತ್ತರ ಇದ್ದಾರೆ. ಇದೇ ವ್ಯಕ್ತಿನೇ ಈಗ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷವನ್ನ ಸೇರಿದ್ದಾರೆ.

ಅಖಿಲೇಶ್ ಯಾದವ್ ಮೇಲೆ ಇವರಿಗೆ ಬಲವಾದ ನಂಬಿಕೆ ಇದೆ. ಅದಕ್ಕೇನೆ ಧರ್ಮೇಂದ್ರ ಸಿಂಗ್ ಈ ಪಕ್ಷ ಸೇರಿದ್ದಾರೆ. ಹಾಗಂತ ಪಕ್ಷದ ರಾಜ್ಯಾಧ್ಯಕ್ಷ ನರೇಶ್ ಉತ್ತಮ್ ಪಟೇಲ್ ಹೇಳಿಕೊಂಡಿದ್ದಾರೆ.

Edited By :
PublicNext

PublicNext

23/01/2022 02:54 pm

Cinque Terre

71.43 K

Cinque Terre

7