ಜಮ್ತಾರಾ: ಇತ್ತೀಚೆಗೆ ಎಡವಟ್ಟು ಹೇಳಿಕೆಗಳನ್ನು ಕೊಡುತ್ತಿರುವ ಸಚಿವ, ಶಾಸಕರ ಸಂಖ್ಯೆ ಹೆಚ್ಚಾಗಿದೆ. ಇದೀಗ ಕಾಂಗ್ರೆಸ್ ಶಾಸಕರೊಬ್ಬರು ರಸ್ತೆಗಳನ್ನು ಕಂಗನಾ ರಣಾವತ್ ಅವರ ಕೆನ್ನೆಗಳಿಗೆ ಹೋಲಿಸಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಹೌದು ಜಾರ್ಖಂಡ್ ನ ಜಮ್ತಾರಾದಲ್ಲಿ ರಸ್ತೆಗಳು ನಟಿ ಕಂಗನಾ ರಣಾವತ್ ಕೆನ್ನೆಗಿಂತ ಸುಂದರವಾಗಲಿದೆ ಎಂದು ಭರವಸೆ ನೀಡುವ ಮೂಲಕ ಕಾಂಗ್ರೆಸ್ ಶಾಸಕ ಡಾ ಇರ್ಫಾನ್ ಅನ್ಸಾರಿ ವಿವಾದಕ್ಕೆ ಸಿಲುಕಿದ್ದಾರೆ.
ಶುಕ್ರವಾರ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಡಾ ಇರ್ಫಾನ್ ಅನ್ಸಾರಿ, “ಜಮಾತಾರಾದಲ್ಲಿ 14 ವಿಶ್ವ ದರ್ಜೆಯ ರಸ್ತೆಗಳ ನಿರ್ಮಾಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಚಲನಚಿತ್ರ ನಟಿ ಕಂಗನಾ ರಣಾವತ್ ಅವರ ಕೆನ್ನೆಗಿಂತ ರಸ್ತೆಗಳು ಉತ್ತಮವಾಗಿರುತ್ತವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಹೇಳಿದ್ದಾರೆ.
ನವೆಂಬರ್ 2021ರಲ್ಲಿ ಹೊಸದಾಗಿ ನೇಮಕಗೊಂಡ ರಾಜಸ್ಥಾನ ಸಚಿವ ರಾಜೇಂದ್ರ ಸಿಂಗ್ ಗುಧಾ, ರಾಜ್ಯದ ರಸ್ತೆಗಳನ್ನು ನಟಿ ಕತ್ರಿನಾ ಕೈಫ್ ಕೆನ್ನೆಗಳಿಗೆ ಹೋಲಿಸಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು.
ಕಳೆದ ತಿಂಗಳು, ಮಹಾರಾಷ್ಟ್ರದ ಸಚಿವ ಮತ್ತು ಹಿರಿಯ ಶಿವಸೇನೆ ನಾಯಕ ಗುಲಾಬ್ರಾವ್ ಪಾಟೀಲ್ ತಮ್ಮ ಕ್ಷೇತ್ರದ ರಸ್ತೆಗಳನ್ನು ಹೇಮಾ ಮಾಲಿನಿ ಕೆನ್ನೆಗೆ ಹೋಲಿಸಿ ರಾಜ್ಯ ಮಹಿಳಾ ಆಯೋಗದ ಕೆಂಗಣ್ಣಿಗೆ ಗುರಿಯಾದ ಬಳಿಕ ಕ್ಷಮೆಯಾಚಿಸಿದ್ದರು.
PublicNext
15/01/2022 03:28 pm