ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೇಕೆದಾಟು ಪಾದಯಾತ್ರೆ : ಸಿದ್ದು ಸುಸ್ತು.. ಮನೆಗೆ ವಾಪಸ್ಸು..

ರಾಮನಗರ : ಕೋವಿಡ್ ನಿಯಮ ಉಲ್ಲಂಘನೆ ಮಾಡಿ ಕನಕಪುರ ಸಂಗಮದಲ್ಲಿ ಇಂದು ಮೇಕೆದಾಟು ಯೋಜನೆ ಪಾದಯಾತ್ರೆ ಆರಂಭವಾಗಿದೆ. ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಾಲ್ಕು ಕಿ.ಮೀ. ನಡೆದು ಸುಸ್ತಾಗಿ ಬೇರೊಂದು ಕಾರಿನಲ್ಲಿ ವಾಪಸ್ಸಾಗಿದ್ದಾರೆ.

73 ವರ್ಷ ವಯಸ್ಸಿನ ಸಿದ್ದರಾಮಯ್ಯ ಅವರು ಮೇಕೆದಾಟು ಪಾದಯಾತ್ರೆಯಲ್ಲಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ನೇತೃತ್ವ ವಹಿಸಿದ್ದರು.

ಜನವರಿ 18 ರವರೆಗೆ ನಡೆಯುವ ಈ ಪಾದಯಾತ್ರೆಗೆ ಇಂದು ಕನಕಪುರ ತಾಲ್ಲೂಕಿನ ಕಾವೇರಿ ತಟ, ಸಂಗಮದಲ್ಲಿ ಚಾಲನೆ ನೀಡಲಾಯಿತು. ಕೋವಿಡ್ ಕಾರಣ ಸರ್ಕಾರ ವೀಕೆಂಡ್ ಕರ್ಫ್ಯೂ ವಿಧಿಸಿದ್ದರೂ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

Edited By : Nirmala Aralikatti
PublicNext

PublicNext

09/01/2022 02:31 pm

Cinque Terre

43.87 K

Cinque Terre

28

ಸಂಬಂಧಿತ ಸುದ್ದಿ