ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋವಿಡ್ ರೂಲ್ಸ್ ಎಲ್ಲರಿಗೂ ಒಂದೇ-ಕಾಂಗ್ರೆಸ್ ಗೆ ಇಲ್ಲಿ ಪ್ರತ್ಯೇಕ ರೂಲ್ ಏನಿಲ್ಲ

ಬೆಂಗಳೂರು:ಕಾಂಗ್ರೆಸ್ ಪಕ್ಷ ಮೇಕೆದಾಟು ಯೋಜನೆಗಾಗಿಯೇ ಪಾದಯಾತ್ರೆ ಮಾಡುತ್ತಿದೆ. ಏನೇ ರೂಲ್ಸ್ ಬಂದರೂ ಸರಿಯೇ. ನಾವು ಇದನ್ನ ಬಿಡೋದಿಲ್ಲ. ಮಾಡಿಯೇ ತೀರುತ್ತಿವೆ ಅಂತಲೇ ಪಟ್ಟುಹಿಡಿದಿವೆ. ಆದರೆ ಇದಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.

ಇಡೀ ರಾಜ್ಯಕ್ಕೆ ಒಂದೇ ರೂಲ್ಸ್ ಇದೆ. ಇಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿಯೇ ಪ್ರತ್ಯೇಕ ರೂಲ್ಸ್ ಮಾಡಲು ಆಗೋದಿಲ್ಲ ಅಂತಲೇ ಹೇಳಿ ಬಿಟ್ಟಿದ್ದಾರೆ ಗೃಹ ಸಚಿವ ಆರಗ ಜ್ಞಾನೇಂದ್ರ.

ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಒಂದೇ ರೂಲ್ಸ್ ಮಾಡಿದೆ. ಎಲ್ಲರೂ ಅದನ್ನ ಪಾಲಿಸಲೇಬೇಕು.ಜೀವನ್ಮರಣದ ಈ ಸಮಯದಲ್ಲಿ ರಾಜಕೀಯ ಯಾರು ಮಾಡ್ತಾರೆ. ಎಲ್ಲವನ್ನೂ ರಾಜಕೀಯಕ್ಕೆ ತಾಳೆ ಹಾಕಿ ನೋಡಲೇಬಾರದು ಅಂತಲೇ ಆರಗ ಜ್ಞಾನೇಂದ್ರ,ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ಕೊಟ್ಟಿದ್ದಾರೆ.

Edited By :
PublicNext

PublicNext

06/01/2022 08:30 pm

Cinque Terre

60.1 K

Cinque Terre

4

ಸಂಬಂಧಿತ ಸುದ್ದಿ