ರಾಮನಗರ: ಇಡೀ ರಾಜ್ಯವೇ ಡಿಕೆ ಸುರೇಶ್ ಮತ್ತು ಸಚಿವ ಅಶ್ವತ್ಥ ನಾರಾಯಣ ಗಲಾಟೆಯನ್ನ ಕಂಡಿದೆ. ರಾಜಕೀಯದಲ್ಲೂ ಈ ವಿಷಯ ಬಹುವಾಗಿಯೆ ಚರ್ಚೆ ಆಗುತ್ತಿದೆ. ಆದರೆ ಇದೇ ವೇದಿಕೆ ಮೇಲೆ ಡಿಕೆ ಸುರೇಶ್ RSS ಬಗ್ಗೆನೂ ಮಾತನಾಡಿದ್ದಾರೆ. ಆ ಕೂಡಲೇ ಅಲ್ಲಿಯೇ ನೆರೆದಿದ್ದ ಬಿಜೆಪಿ ಕಾರ್ಯಕರ್ತರು ಡಿಕೆ ಸುರೇಶ್‌ಗೆ ಖಡಕ್ ಆಗಿಯೇ ವಾರ್ನಿಂಗ್ ಕೊಟ್ಟಿದ್ದಾರೆ.
ನಮ್ಮ ಸಂಸ್ಕೃತಿ ಯಾವುದು ಅಂತ ನಮಗೆ ಗೊತ್ತಿದೆ. RSS ಕಲಿಸಿಕೊಟ್ಟ ಸಂಸ್ಕೃತಿಯನ್ನ ನಾವು ಕಲಿಯಬೇಕೆ ಅಂತಲೇ ಸುರೇಶ್ ವೇದಿಕೆ ಮೇಲೆನೆ ಕೇಳಿದರು. ಆಗ ಅಲ್ಲಿದ್ದ ಕಾರ್ಯಕರ್ತರು ನೀವೂ RSS ಬಗ್ಗೆ ಮಾತನಾಡಲೇಬೇಡಿ ಅಂತಲೇ ಕೂಗಿ ಎಚ್ಚರಿಕೆ ಕೊಟ್ಟರು. ಆಗ ಸುರೇಶ್ ಮಾತಿನ ದಾಟಿಯನ್ನ ಚೇಂಜ್ ಮಾಡಿ ನೇರವಾಗಿಯೆ ಅಶ್ವತ್ಥ ನಾರಾಯಣ ಮೇಲೆ ವಾಗ್ದಾಳಿ ಮಾಡಿದರು.
ಅಶ್ವತ್ಥ ನಾರಾಯಣ ಅವರೇ ನಿಮ್ಮಿಂದ ನಮಗೆ ಏನೂ ಆಗಬೇಕಿಲ್ಲ. ನಿಮ್ಮಿಂದ ನಾವು ಏನೂ ಕಲಿಯಬೇಕಿಲ್ಲ ಅಂತಲೇ ನೇರವಾಗಿಯೇ ಹೇಳಿದರು. ಈ ಮಾತನ್ನ ಕೇಳಿ ಅಶ್ವತ್ಥ ನಾರಾಯಣ ವೇದಿಕೆ ಮೇಲೆ ಮಂದಹಾಸ ಬೀರುತ್ತಲೇ ಕುಳಿತಿದ್ದರು.
PublicNext
03/01/2022 10:37 pm