ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಚಮಸಾಲಿ 2A ಮೀಸಲಾತಿ ವಿಚಾರ: ಸರ್ಕಾರದ ವಿರುದ್ಧ ಸಿಟ್ಟಾದ ಶ್ರೀಗಳು

ದಾವಣಗೆರೆ:ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ, ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮಿಗಳು ಸರ್ಕಾರದ ವಿರುದ್ಧ ಈಗ ಮತ್ತೆ ಕಿಡಿಕಾರಿದ್ದಾರೆ.

ಸರ್ಕಾರ ಮನಸ್ಸು ಮಾಡಿದರೇ ಈ ವಿಚಾರವಾಗಿ ಕೇವಲ 15 ದಿನಗಳಲ್ಲಿ ವರದಿ ಕೊಡಬಹುದು.ಆದರೆ ಸಮಯ ತಳ್ಳುತ್ತಲೆ

ಮೂಗಿಗೆ ತುಪ್ಪ ಸವರುವ ಕೆಲಸ ಆಗುತ್ತಿದೆ ಅಂತಲೇ ಶ್ರೀಗಳು ಸಿಟ್ಟಾಗಿದ್ದಾರೆ.

ಎಸ್ಸಿ, ಎಸ್ಟಿ ಮೀಸಲಾತಿ ನೀಡಲು ಮಾತ್ರ ಅಧ್ಯಯನ ಅವಶ್ಯಕತೆ ಇದೆ.ಆದರೆ ಸರ್ಕಾರ ಸಮಿತಿ ಮಾಡಿ ಅಧ್ಯಯನ‌ ನಡೆಸುತ್ತಿದೆ. 2A ಮೀಸಲಾತಿ ನೀಡಲು ಶಿಕ್ಷಣ ಮತ್ತು ಸಾಮಾಜಿಕ ವರದಿ ಸಾಕು ಅಂತಲೇ ಸ್ವಾಮಿ ತಿಳಿಸಿದ್ದಾರೆ.

ಈ ವಿಚಾರವಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಸಿಎಂ ಹೋಳಿಗೆ ತುಪ್ಪ ನೀಡ್ತಾರೆ ಅನ್ನೋ ನಂಬಿಕೆ ಇದೆ ಅಂತಲೂ ಶ್ರೀಗಳು ಹೇಳಿದ್ದಾರೆ.

Edited By : Nagesh Gaonkar
PublicNext

PublicNext

03/01/2022 04:52 pm

Cinque Terre

70.54 K

Cinque Terre

6

ಸಂಬಂಧಿತ ಸುದ್ದಿ