ರಾಮನಗರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ರಾಮನಗರದಲ್ಲಿ ಡಿಸಿ ಕಚೇರಿ ಆವರಣದಲ್ಲಿಯ ಅಂಬೇಡ್ಕರ್ ಮತ್ತು ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಿದರು.
ಈ ವೇಳೆ ಸಚಿವರಾದ ಡಾ ಕೆ ಸುಧಾಕರ್, ಸಿ ಎನ್ ಅಶ್ವತ್ಥ್ ನಾರಾಯಣ, ಭೈರತಿ ಬಸವರಾಜ್, ಬೆಂಗಳೂರು ಗ್ರಾ. ಸಂಸದ ಡಿ ಕೆ ಸುರೇಶ್, ಶಾಸಕರಾದ ಮಂಜುನಾಥ, ಅನಿತಾ, ಎಂಎಲ್ಸಿ ಯೋಗೇಶ್ವರ್, ಎಸ್ ರವಿ, ಸಿ ಎಂ ಲಿಂಗಪ್ಪ, ಪುಟ್ಟಣ್ಣ, ಆ.ದೇವೇಗೌಡ ಉಪಸ್ಥಿತರಿದ್ದರು.
ಇದೇ ವೇಳೆ ಸಂಸದ ಡಿ ಕೆ ಸುರೇಶ್ ಮತ್ತು ಸಚಿವ ಸಿ ಎನ್ ಅಶ್ವತ್ಥ್ ನಾರಾಯಣ ಮಧ್ಯೆ ಮಾತಿನ ಚಕಮಕಿ ನಡೆದಿದ್ದು ಸಿಎಂ ಮುಂದೆಯೇ ಹೈ ಡ್ರಾಮಾ ನಡೆದಿದೆ.
ಇನ್ನು ಸಿಎಂ ಸಮ್ಮುಖದಲ್ಲಿಯೇ ಡಿ.ಕೆ ಸುರೇಶ ವೇದಿಕೆ ಮೇಲೆ ಧರಣಿ ಕುಳಿತ್ತಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಮುಂದೆ ಡಿಕೆ ಡಿಕೆ ಅಂತ ಕೆಲವರು ಘೋಷಣೆ ಕೂಗಿದ್ದಾರೆ. ಜೊತೆಗೆ ದಲಿತ ಮುಖಂಡರು ಕಪ್ಪು ಪಟ್ಟಿ ಪ್ರದರ್ಶನ ಮಾಡಿದ್ದಾರೆ. ಅಲ್ಲದೇ ಕಾರ್ಯಕ್ರಮಕ್ಕೆ ಸರಿಯಾಗಿ ಕರೆದಿಲ್ಲ ಅಂತ ಆಕ್ರೋಶ ಹೊರಹಾಕಿದ್ದು, ಕಾರ್ಯಕ್ರಮದಲ್ಲಿ ಗದ್ದಲ ಉಂಟಾಗಿತ್ತು.
PublicNext
03/01/2022 01:34 pm