ಬೆಂಗಳೂರು:ರಾಜ್ಯಾದ್ಯಂತ ಡಿಸೆಂಬರ್-28 ರಿಂದಲೇ ನೈಟ್ ಕರ್ಫ್ಯೂ ಜಾರಿ ಆಗುತ್ತದೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಇಂದು ಬೆಂಗಳೂರಿನಲ್ಲಿ ಹೇಳಿದ್ದಾರೆ.
ನೈಟ್ ಕರ್ಫ್ಯೂ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಿಎಂ ಕಚೇರಿಯಲ್ಲಿ ನಡೆದ ಮಹತ್ವದ ಸಭೆಯ ಬಳಿಕ ಸುಧಕಾರ್ ಈ ವಿಷಯ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಸಭೆ ಸಮಾರಂಭಗಳಲ್ಲಿ ಭಾಗಿ ಆಗುವ ಜನರಿಗೆ ಕೇವಲ ಶೇಕಡ 50 ರಷ್ಟು ಮಾತ್ರ ಅವಕಾಶ ಕೊಡಲಾಗಿದೆ. ಇನ್ನೂ ಇದೇ ಡಿಸೆಂಬರ್ 28 ರಿಂದಲೇ ನೈಟ್ ಕರ್ಫ್ಯೂ ಜಾರಿ ಆಗುತ್ತದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೂ ನೈಟ್ ಕರ್ಫ್ಯೂ ಇರುತ್ತದೆ ಎಂದು ವಿವರಿಸಿದ್ದಾರೆ ಸುಧಾಕರ್.
ಜನವರಿ ೧೦ ರಿಂದ ಬೂಸ್ಟರ್ ಡೋಜ್ ನೀಡಲಾಗುತ್ತದೆ. ಆದರೆ ಮಕ್ಕಳಿಗೆ ಲಸಿಕೆ ನೀಡಲು ಕೇಂದಿಂದ ಗೈಡ್ ಲೈನ್ ಬರಬೇಕಿದೆ. ಉಳಿದಂತೆ ಇದೇ 28 ರ ರಾತ್ರಿ 10 ಗಂಟೆಯಿಂದಲೇ ನೈಟ್ ಕರ್ಫ್ಯೂ ಜಾರಿ ಆಗುತ್ತದೆ ಅಂತಲೇ ಸುಧಾಕರ್ ಹೇಳಿದ್ದಾರೆ.
PublicNext
26/12/2021 10:35 am