ಬೆಳಗಾವಿ:ಪ್ರಚಾರಕ್ಕಾಗಿಯೇ ಸದನ ನಡೆಸಲಾಗುತ್ತಿದೆ. ಜನರ ಸಮಸ್ಯೆಗಳಿಗೆ ಪರಿಹಾರ ಇವರಿಗೆ ಬೇಕಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸದನದಲ್ಲಿ ನಮ್ಮ ಪಕ್ಷದವರು ರಾಯಣ್ಣನ ಪ್ರತಿಮೆ ಭಗ್ನಗೊಳಿಸಿದ್ದ ವಿಚಾರ ಪ್ರಸ್ತಾಪಿಸಲು ಮುಂದಾದರು. ಆದರೆ ಕಾಂಗ್ರೆಸ್ ನವರು ಈ ಸಮಯದಲ್ಲಿ ಭೈರತಿ ಬಸವರಾಜ್ ಅವರ ವಿಷಯ ಎತ್ತಿಕೊಂಡು ಗದ್ದಲ ಎಬ್ಬಿಸಿದರು. ಸಭಾತ್ಯಾಗ ಮಾಡಿಯೇ ಬಿಟ್ಟರು ಎಂದು ವಿವರಿಸಿದ್ದಾರೆ ಎಚ್‌ಡಿಕೆ.
ಹೀಗೆ ಮಾಡಿರೋ ಈ ನಾಯಕರ ಕಮಿಟ್‌ಮೆಂಟ್ ಏನ್ ಇದೆ. ಇವರಿಗೆ ಪ್ರಚಾರ ಬೇಕಿದೆ.ಜನರ ಸಮಸ್ಯೆಗಳ ಪರಿಹಾರ ಬೇಕಾಗಿಲ್ಲ. ಪ್ರಚಾರಕ್ಕಾಗಿಯೇ ಸದನ ನಡೆಸುತ್ತಿದ್ದಾರೆ ಅಂತಲೂ ದೂರಿದ್ದಾರೆ ಕುಮಾರಸ್ವಾಮಿ.
PublicNext
22/12/2021 02:01 pm