ಬೆಳಗಾವಿ:ಮೈಸೂರಿನಲ್ಲಿ ಈಗ ನೀವು ಸಭೆ ಮಾಡಬೇಡಿ. ನಾನು ಇಲ್ಲದೇ ಸಭೆ ಮಾಡ್ಬೇಡಿ. ಅದು ಸರಿಯೂ ಅಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಪಕ್ಷದ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಹೇಳಿದ್ದಾರೆ.
ಮೇಕೆದಾಟು ಯೋಜನೆಯನ್ನ ತ್ವರಿತವಾಗಿಯೇ ಅನುಷ್ಠಾನಗೊಳಿಸಬೇಕು ಎಂದು ಕಾಂಗ್ರೆಸ್ ಪಾದಯಾತ್ರೆ ಪ್ಲಾನ್ ಮಾಡಿದೆ. ಇದರ ಹಿನ್ನೆಲೆಯಲ್ಲಿಯೇ ಇದೇ 23 ರಂದು ಮೈಸೂರಿನಲ್ಲಿ ಪೂರ್ವಭಾವಿ ಸಭೆ ಮಾಡುವ ಯೋಚನೆಯನ್ನ ಡಿಕೆಸಿ ಹೊಂದಿದ್ದರು.
ಸುವರ್ಣ ಸೌಧದ ಮೊಗಸಾಲೆಯಲ್ಲಿ ಶಾಸಕ ಕೆ.ಜೆ.ಜಾರ್ಜ್ ಜೊತೆಗೆ ಸಿದ್ದರಾಮಯ್ಯ ಮಾತನಾಡುತ್ತಿದ್ದರು. ಈ ವೇಳೆ ಡಿಕೆಶಿ ಕೂಡ ಇಲ್ಲಿಗೆ ಬಂದರು. ಆಗಲೇ ಸಿದ್ದರಾಮಯ್ಯ ನಾನು ಇಲ್ಲದೇ ಮೈಸೂರಿನಲ್ಲಿ ಸಭೆ ಮಾಡ್ಬೇಡಿ ಅಂತಲೇ ಹೇಳಿದ್ದಾರೆ.
ಸದನ ನಡೆಯುತ್ತಿರೋ ಈ ವೇಳೆಯಲ್ಲಿ ಸಭೆ ಸರಿ ಅಲ್ಲ ಅಂತಲೇ ಮೈಸೂರು ಭಾಗದ ಪಕ್ಷದ ಶಾಸಕರು ಮತ್ತು ಮಾಜಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಅದಕ್ಕೇನೆ ಡಿಕೆ ಶಿವಕುಮಾರ್ ಅವರಿಗೆ ಸಭೆ ಈಗಲೇ ಬೇಡ ಅಂತಲೇ ಸಿದ್ದರಾಮಯ್ಯ ಹೇಳಿದ್ದಾರೆ.
PublicNext
21/12/2021 09:49 am