ಬೆಳಗಾವಿ:ರಾಜ್ಯದಲ್ಲಿ ಮತಾಂತರ ಕಾಯ್ದೆ ಜಾರಿಗೆ ಸಂಬಂಧಿಸಿದಂತೆ ವಿರೋಧ ಪಕ್ಷ ವಿರೋಧಿಸುತ್ತಲೇ ಬಂದಿದೆ. ಇದರ ಮಧ್ಯೆನೆ ಮತಾಂತರ ಕಾಯ್ದೆ ಜಾರಿ ಆಗೋ ಸಾಧ್ಯತೆ ಇದೆ. ಅಧಿವೇಶನದ ಇಂದಿನ ಕಲಾಪದಲ್ಲಿ ಮತಾಂತರ ಕಾಯ್ದೆ ಚರ್ಚೆ ಜೋರಾಗುವ ಸಾಧ್ಯತೆ ಇದೆ.
ಹೌದು ಮತಾಂತರ ಕಾಯ್ದೆ ಸಂಬಂಧಿಸಿದಂತೆ ಇಂದು ಚರ್ಚೆಗಳು ಜೋರಾಗುವ ಹಾಗಿದೆ. ಮತಾಂತರ ಕಾಯ್ದೆ ಜಾರಿಯಲ್ಲಿ ಸರ್ಕಾರದ ನಿಲುವು ಗಟ್ಟಿಯಾಗಿಯೇ ಇದೆ. ಅದನ್ನ ಇಂದು ಸದನದಲ್ಲಿ ಮಂಡಿಸೋ ಸಾಧ್ಯತೆ ಇದೆ. ವಿರೋಧ ಪಕ್ಷ ಇದಕ್ಕೆ ಯಾವೆಲ್ಲ ರೀತಿ ವಿರೋಧ ವ್ಯಕ್ತಪಡಿಸುತ್ತದೆ ಎಂಬ ಕುತೂಹಲವೂ ಇದೆ.
PublicNext
21/12/2021 08:32 am