ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ-ಬೇಟಗೇರಿ ನಗರಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಶ್ವೇತಾ ದಂಡಿನ ಸ್ಪರ್ಧೆ: ಅಭಿವೃದ್ಧಿಯೇ ಮೂಲಧ್ಯೇಯ...!

ಗದಗ: ಒಂದು ಊರಿನ ಹಾಗೂ ವಾರ್ಡಿನ ಅಭಿವೃದ್ಧಿ ಆಗಬೇಕಾದರೇ ವಿದ್ಯಾವಂತರ ಸಹಭಾಗಿತ್ವ ನಿಜಕ್ಕೂ ಅತ್ಯಾವಶ್ಯಕ. ಇನ್ನು ವಿದ್ಯಾವಂತರೇ ಜನಪ್ರತಿನಿಧಿಗಳಾದರೇ ನಿಜಕ್ಕೂ ಅಭಿವೃದ್ಧಿಯ ಪರ್ವ ಆರಂಭ ಖಂಡಿತ. ಈ ಹಿನ್ನಲೆಯಲ್ಲಿ ನನ್ನ ವಾರ್ಡ್ ಸಮಸ್ಯೆಯನ್ನು ನಾನೇ ಬಗೆಹರಿಸಿ ಜನರ ಸೇವೆ ಮಾಡಬೇಕೆಂಬ ಸದುದ್ದೇಶದಿಂದ ಗದಗ-ಬೇಟಗೇರಿ ನಗರಸಭೆ ಚುನಾವಣೆಗೆ 11ನೇ ವಾರ್ಡಿನಿಂದ ಬಿಜೆಪಿ ಪಡೆಯ ಪ್ರಬಲ ಅಭ್ಯರ್ಥಿಯಾಗಿ ಶ್ವೇತಾ ದಂಡಿನ ಸ್ಪರ್ಧೆ ಮಾಡುತ್ತಿದ್ದಾರೆ.

ಹೌದು.. ಮುದ್ರಣಕಾಶಿ ಗದಗ ನಗರದ ಹನ್ನೊಂದನೇ ವಾರ್ಡಿನ ಸಮಸ್ಯೆಗಳನ್ನು ಅನುಭವಿಸಿ ಸ್ವತಃ ಪರಿಹಾರಕ್ಕಾಗಿಯೇ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಶ್ವೇತಾ ದಂಡಿನ. ವಿಶ್ವವನ್ನೇ ತನ್ನತ್ತ ನೋಡುವಂತೆ ಮಾಡಿರುವ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯವೈಖರಿಯಿಂದ ಪ್ರೇರಿತರಾದ ಶ್ವೇತಾ ಅವರು ವಾರ್ಡ್ ಹಾಗೂ ಗದಗ-ಬೇಟಗೇರಿ ನಗರಸಭೆ ಅಭಿವೃದ್ಧಿ ಮಾಡುವ ಮಹತ್ವದ ಕನಸನ್ನು ಕಂಡಿದ್ದಾರೆ. ಬಿ.ಎಸ್.ಸಿ ಪದವೀಧರೆಯಾಗಿರುವ ಶ್ವೇತಾ ದಂಡಿನ ಅವರು, ಕಾಲೇಜಿನ ದಿನಗಳಿಂದಲೇ ಎಬಿವಿಪಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ವಿದ್ಯಾರ್ಥಿಗಳ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿರುವ ಹೋರಾಟಗಾರ್ತಿ. ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರಿಗೆ ಸೂಕ್ತ ಪರಿಹಾರಕ್ಕೆ ಹೋರಾಟ ಮಾಡಿರುವ ಕೆಚ್ಚೆದೆಯ ಕನ್ನಡತಿ ಶ್ವೇತಾ ದಂಡಿನ.

ಸುಮಾರು 56 ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಅಕ್ಷರ ದಾಸೋಹಕ್ಕೆ ಉತ್ತರ ಕರ್ನಾಟಕದಲ್ಲಿಯೇ ಹೆಸರಾದ ದಂಡಿನ ಕುಟುಂಬದ ಮನೆಮಗಳು. ಶೈಕ್ಷಣಿಕ ಸೇವೆಯನ್ನೇ ಜೀವನದ ಮೂಲ ಧೇಯವಾನ್ನಾಗಿ ಮಾಡಿಕೊಂಡಿದ್ದ ಬಿ.ಎಫ್.ದಂಡಿನ ಅವರ ಮುದ್ದಿನ ಮೊಮ್ಮಗಳು. ಈಗ ಗದಗ-ಬೇಟಗೇರಿ ನಗರಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ 11 ನೇ ವಾರ್ಡಿನಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ.

ಇನ್ನು ನರೇಂದ್ರ ಮೋದಿಯವರು ಆಡಳಿತ ವೈಖರಿಯನ್ನು ಮೆಚ್ಚಿ ರಾಜಕೀಯ ರಂಗಕ್ಕೆ ಪಾದಾರ್ಪಣೆ ಮಾಡಿರುವ ಶ್ವೇತಾ ದಂಡಿನ ಅವರು, ವಾರ್ಡ್ ನ್ನು ಪಾರಂಪರಿಕವಾಗಿ ಅಭಿವೃದ್ಧಿಗೊಳಿಸುವ ಮಹತ್ವದ ಕನಸನ್ನು ಹೊತ್ತು ಚುನಾವಣೆ ಕಣಕ್ಕೆ ಇಳಿದಿದ್ದಾರೆ. ಹಾಗಿದ್ದರೇ ಶ್ವೇತಾ ಅವರ ಬಗ್ಗೆ ಸಾರ್ವಜನಿಕರು ಏನ ಹೇಳ್ತಾರೆ ನೀವೆ ಕೇಳಿ...

ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಶ್ವೇತಾ ದಂಡಿನ ಅವರು ಸಾಕಷ್ಟು ಅಭಿವೃದ್ಧಿ ಕನಸನ್ನು ಹೊತ್ತು ಚುನಾವಣೆಗೆ ನಿಂತಿದ್ದಾರೆ. ಅವರ ಗೆಲುವು ಅವರಿಗೆ ಮಾತ್ರವಲ್ಲದೆ ಹನ್ನೊಂದನೇ ವಾರ್ಡಿನ ಮತದಾರರ ಗೆಲುವಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ಮುಖಂಡರಾದ ರವಿ ದಂಡಿನ ಅವರು ಕೂಡ ತಮ್ಮ ಮಾತನ್ನು ಹಂಚಿಕೊಂಡಿದ್ದಾರೆ ಕೇಳಿ...

ಒಟ್ಟಿನಲ್ಲಿ ವಿದ್ಯಾವಂತೆ ಅಭ್ಯರ್ಥಿ ಶ್ವೇತಾ ದಂಡಿನ ಅವರಿಗೆ ಎಲ್ಲೆಡೆಯೂ ಬೆಂಬಲ ವ್ಯಕ್ತವಾಗಿದ್ದು, ಈ ಬಾರಿ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಆರಿಸಿ ಬರಲಿ ಎಂಬುವುದು ಹನ್ನೊಂದನೇ ವಾರ್ಡಿನ ಅಭ್ಯರ್ಥಿಗಳ ಆಶಯವಾಗಿದೆ.

Edited By : Nagesh Gaonkar
PublicNext

PublicNext

19/12/2021 03:29 pm

Cinque Terre

80.41 K

Cinque Terre

2

ಸಂಬಂಧಿತ ಸುದ್ದಿ