ಬಳ್ಳಾರಿ: ಸಂಡೂರು ತಹಶೀಲ್ದಾರ್ ರಶ್ಮಿ ಅವರನ್ನು ಈ ಕೂಡಲೇ ವರ್ಗಾವಣೆ ಮಾಡಬೇಕು ಎಂದು ಶಾಸಕ ತುಕಾರಾಮ್ ನಿನ್ನೆ ಬುಧವಾರ ಸದನದಲ್ಲಿ ಹಕ್ಕುಚ್ಯುತಿ ಮಂಡಿಸಿದ್ದರು. ಇದರ ಬೆನ್ನಲ್ಲೇ ರಶ್ಮಿ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ನೀಡಿದೆ.
ತಹಶೀಲ್ದಾರ್ ಕಚೇರಿಗೆ ಹೋದಾಗ ಶಾಸಕರಿಗೆ ಗೌರವ ಕೊಡೊದಿಲ್ಲ. ಮತ್ತು ಅವರ ವಿರುದ್ಧ ಹಲವು ಆರೋಪಗಳಿವೆ. ಇದೆಲ್ಲದರ ಬಗ್ಗೆ ಅವರ ಮೇಲೆ ತನಿಖೆಗೆ ಆದೇಶ ನೀಡಬೇಕು. ಹಾಗೂ ಕೂಡಲೇ ಅವರನ್ನು ವರ್ಗಾವಣೆ ಮಾಡಬೇಕೆಂದು ಸಂಡೂರು ಶಾಸಕ ತುಕಾರಾಮ್ ಒತ್ತಾಯಿಸಿದ್ದರು. ಇದೇ ವಿಚಾರವಾಗಿ ಸದನದಲ್ಲಿ ಗದ್ದಲವೂ ಆಗಿತ್ತು. ಈ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾಧಿಕಾರಿ ಪವನ್‌ಕುಮಾರ್ ಮಲಪಾಟಿ ಅವರು ವರ್ಗಾವಣೆ ಮಾಡಿದ್ದಾರೆ. ಹಾಗೂ ವರ್ಗಾವಣೆ ಸ್ಥಳ ನಿಯೋಜಿಸದೇ ಕಂದಾಯ ಇಲಾಖೆ ಬಹುಮಹಡಿ ಕಟ್ಟಡ ಬೆಂಗಳೂರಿನಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಿದ್ದಾರೆ.
PublicNext
16/12/2021 03:50 pm