ಬೆಳಗಾವಿ:ಜೆಡಿಎಸ್ ಈಗ ಕೆಲವು ಜಿಲ್ಲೆಯಲ್ಲಿ ಮಾತ್ರ ಉಳಿದಿದೆ.ಧಾರವಾಡದಲ್ಲಿ ಅಷ್ಟು ಅಸ್ತಿತ್ವಕ್ಕೆ ಇಲ್ಲ ಜಿಲ್ಲೆಯಲ್ಲಂತೂ ಅಸ್ತಿತ್ವಕ್ಕೇ ಇಲ್ಲ.ಹಾಗೇನೆ ಅಲ್ಲಿ ಈಗ ಜಾತ್ಯಾತೀತೆ ಉಳಿದಿಲ್ಲ. ಇಂತಹ ಸಮಯದಲ್ಲಿ ಕೋನರೆಡ್ಡಿ ಒಳ್ಳೆ ನಿರ್ಧಾರ ಮಾಡಿದ್ದಾರೆ. ಅವರಿಗೆ ಇದು ರಾಜಕೀಯ ಜೀವನದಲ್ಲಿ ಹೊಸ ಅಧ್ಯಾಯ ಅಂತಲೇ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿಯೇ ಕೋನರೆಡ್ಡಿ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಇದೇ ಸಮಯದಲ್ಲಿಯೆ ಸಿದ್ದರಾಮಯ್ಯ ಮಾತನಾಡಿದ್ದಾರೆ. ಕೋನರೆಡ್ಡಿ ನನಗೆ ಬಹಳ ಹಳೆ ಗೆಳೆಯ. ನಾನು ಜೆಡಿಎಸ್‌ನಲ್ಲಿದ್ದಾಗ ಜೆಡಿಎಸ್ ಯುವ ಘಟಕದ ಅಧ್ಯಕ್ಷನನ್ನಾಗಿ ಮಾಡಿದ್ದೆ ಎಂದು ಹಳೆ ಗೆಳೆತನವನ್ನ ನೆನಪಿಸಿಕೊಂಡಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ.
ಕೋನರೆಡ್ಡಿ ಜೆಡಿಎಸ್‌ಪಕ್ಷದಿಂದ ಶಾಸಕರಾಗಿದಲ್ಲ. ಸ್ವತಃ ಶಕ್ತಿ ಮೇಲೇನೆ ಶಾಸಕರಾಗಿದ್ದವರು. ರೈತ ಪರ ಸಾಕಷ್ಟು ಹೋರಾಟ ಮಾಡಿರೋ ಕೋನರೆಡ್ಡಿ ಕಾಂಗ್ರೆಸ್ ಸೇರುವ ಒಳ್ಳೆಯ ನಿರ್ಧಾರ ಮಾಡಿದ್ದಾರೆ. ಇವರಿಗೆ ಇದು ರಾಜಕೀಯದಲ್ಲಿ ಹೊಸ ಅಧ್ಯಾಯವೇ ಆಗಿದೆ ಅಂತಲೂ ಬಣ್ಣಿಸಿದ್ದಾರೆ ಸಿದ್ದರಾಮಯ್ಯ.
PublicNext
14/12/2021 09:06 pm