ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ ಹೊರುವುದನ್ನು ನಿಷೇಧಿಸಲು ಮತ್ತಷ್ಟು ಕಠಿಣ ಕ್ರಮ ಜಾರಿ: ಸಚಿವ ಪೂಜಾರಿ

ಬೆಳಗಾವಿ: ಮಲ ಹೊರುವ ಪದ್ಧತಿ ನಿಷೇಧಿಸಲು ರಾಜ್ಯದಲ್ಲಿ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿ ಮಾಡಲಾಗುವುದು. ಮತ್ತು ಇದಕ್ಕೆ ಆಸ್ಪದ ನೀಡುವವರ ವಿರುದ್ಧ ಬಿಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಬಿ.ಕೆ. ಹರಿಪ್ರಸಾದ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಮಲ ಹೊರುವ ವ್ಯವಸ್ಥೆ ನಿಷೇಧಕ್ಕಾಗಿ ಹೊಸ ಕಾನೂನು ಅಗತ್ಯವಿಲ್ಲ. ಈಗಿರುವ ಕಾನೂನನ್ನೇ ಕಠಿಣಗೊಳಿಸಲು ಜನಪ್ರತಿನಿಧಿಗಳು ಸಹಕರಿಸಬೇಕು. ಎಲ್ಲ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಪಕ್ಷತೀತವಾಗಿ ಒಂದಾದರೆ ಮಲ ಹೊರುವ ಪದ್ಧತಿಯನ್ನು ತಡೆಗಟ್ಟಬಹುದು. ಮಲ ಹೊರುವ ವ್ಯವಸ್ಥೆಗೆ ನಿಷೇಧವಿದ್ದರೂ ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ ವಸ್ತುಸ್ಥಿತಿ ಪರಿಶೀಲನೆ ಕುರಿತು 6 ತಿಂಗಳಿಗೊಮ್ಮೆ ಸಭೆ ನಡೆಯಬೇಕಿದೆ ಎಂದು ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

14/12/2021 07:54 am

Cinque Terre

57.81 K

Cinque Terre

2

ಸಂಬಂಧಿತ ಸುದ್ದಿ