ಬೆಂಗಳೂರು:ರಾಜ್ಯದಲ್ಲಿ ಈಗ ಮತಾಂತರ ಕಾಯ್ದೆಯದ್ದೇ ತೀವ್ರ ಚರ್ಚೆ ನಡೆಯುತ್ತಿದೆ. ನಾಳೆ ಬೆಳಗಾವಿಯಲ್ಲಿ ನಡೆಯಲಿರೋ ಅಧಿವೇಶನದಲ್ಲೂ ಈ ಬಗ್ಗೆ ಚರ್ಚೆ ಆಗುವ ಸಾಧ್ಯತೆ ಹೆಚ್ಚಿದೆ.ಸರ್ಕಾರದ ಈ ನಿಲುವಿನ ಬಗ್ಗೆ ಕಾಂಗ್ರೆಸ್ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಕಠುವಾಗಿಯೇ ಟೀಕಿಸಿದ್ದಾರೆ.
ಮತಾಂತರವನ್ನ ಬಲವಂತವಾಗಿ ಮಾಡಲೇಬಾರದು ಅನ್ನೋದು ಸಂವಿಧಾನದಲ್ಲಿಯೇ ಇದೆ. ಆದರೆ ಸರ್ಕಾರ ಮತಾಂತರ ಕಾಯ್ದೆ ತರೋಕೆ ಮುಂದಾಗಿದೆ. ಸರ್ಕಾರ ಎಲ್ಲದರಲ್ಲೂ ವಿಫಲವಾಗುತ್ತಿದೆ. ಅದಕ್ಕೇನೆ ಬಸವರಾಜ್ ಬೊಮ್ಮಾಯಿ ಮೂಲಕ ಈ ಕೆಲಸ ಮಾಡಿಸುತ್ತಿದೆ ಅಂತಲೇ ಸಿ.ಎಂ.ಇಬ್ರಾಹಿಂ ಕಾಮೆಂಟ್ ಮಾಡಿದ್ದಾರೆ.
ಅನೇಕ ಮುಸಲ್ಮಾನರು ಲಿಂಗಾಯತರಾಗಿದ್ದಾರೆ. ನಾವೇನಾದ್ರೂ ಕೇಳಿದ್ದೇವಾ ? ವಸೀಂ ರಿಜ್ವಿ ಇತ್ತೀಚಿಗೆ ಹಿಂಧೂ ಧರ್ಮಕ್ಕೆ ಮತಾಂತರ ಹೊಂದಿದ್ದಾರೆ. ಅದನ್ನೂ ನಾವು ಪ್ರಶ್ನೆ ಮಾಡಿಯೇ ಇಲ್ಲ. ಮತಾಂತರ ಆಗೋದು ಬಿಡಿದು ಜನರ ವೈಯಕ್ತಿಕ ವಿಚಾರ ಅಂತಲೇ ಇಬ್ರಾಹಿಂ ಟಾಂಗ್ ಕೊಟ್ಟಿದ್ದಾರೆ.
PublicNext
12/12/2021 05:29 pm