ಲಕ್ನೊ : ಅಜಮ್ ಖಾನ್ ರಂತಹ ಗೂಂಡಾಗಳನ್ನು ಪಕ್ಕದಲ್ಲಿಯೇ ಕೂಡ್ರಿಸಿಕೊಂಡು ಉತ್ತರ ಪ್ರದೇಶ ರಾಜ್ಯವಾಳಿದ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಹಾಗೂ ಪುತ್ರ ಅಖಿಲೇಶ್ ಯಾದವ್ ಬೆಂಬಲಿಗರು ಇನ್ನೂ ತಮ್ಮ ಗೂಂಡಾರಾಜ್ ಮಾಫಿಯಾ ರಾಜ್ ಮನಃಸ್ಥಿತಿಯಿಂದ ಹೊರಬಂದಂತಿಲ್ಲ ಬಂದಂತಿಲ್ಲ.
ಉತ್ತರ ಪ್ರದೇಶದ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಚಾರ ನಡೆಸಿರುವ ಸಮಾಜವಾದಿ ಕಾರ್ಯಕರ್ತರು ಇನ್ನೇನು ತಾವೇ ಅಧಿಕಾರಕ್ಕೆ ಬಂದೇ ಬಿಟ್ಟೆವು ಎಂಬ ಭ್ರಮೆಯಲ್ಲಿ ದೌರ್ಜನ್ಯ ಮುಂದುವರಿಸಿದ್ದಾರೆ.
ಈ ವಿಡಿಯೋ ನೋಡಿದ ಮೇಲೆ ಇವರ ದೌರ್ಜನ್ಯದ ಯಾವ ಮಟ್ಟಕ್ಕಿದೆ ಎಂಬುದನ್ನು ಹೇಳಬೇಕಾಗಿಲ್ಲ. ಅಧಿಕಾರದಲ್ಲಿ ಇಲ್ಲದಿರುವಾಗಲೇ ಈ ರೀತಿ ವರ್ತಿಸುವ ಸಮಾಜವಾದಿ ಕಾರ್ಯಕರ್ತರು ಇನ್ನು ಅದಿಕಾರ ಬಂದ ಮೇಲೆ ಅಥವಾ ಹಿಂದೆ ಅಧಿಕಾರದಲ್ಲಿದ್ದಾಗ ಯಾವ ರೀತಿ ಗೂಂಡಾಗಿರಿ ಮಾಡಿರಬಹುದು ಎಂಬುದನ್ನು ಊಹಿಸಬಹುದಾಗಿದೆ.
ಉತ್ತರ ಪ್ರದೇಶ ಚಾಂದೋಲಿ ಜಿಲ್ಲೆಯಲ್ಲಿ ನಡೆದ ಒಂದು ಘಟನೆ. ರಸ್ತೆ ತಡೆ ನಡೆಸಿ ಪ್ರತಿಭಟನೆಗಿಳಿದಿದ್ದ ಸಮಾಜವಾದಿ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ನಿಯಂತ್ರಿಸಲು ಯತ್ನಸಿದ್ದಾರೆ. ತಮ್ಮನ್ನು ತಡೆದಿದ್ದರಿಂದ ರೊಚ್ಚಿಗೆದ್ದ ಓರ್ವ ಸಮಾಜವಾದಿ ನಾಯಕ ಡಿಎಸ್ ಪಿ ಅನಿರುದ್ದ ಸಿಂಹ್ ಜೊತೆ ವಾಗ್ವಾದ ನಡೆಸಿದ್ದಾನೆ. ಮಾತಿನ ಚಕಮಕಿ ಆರಂಭವಾಗುತ್ತಿದ್ದಂತೆ ಕಾರ್ಯಕರ್ತರು ಸಮವಸ್ತ್ರದಲ್ಲಿದ್ದ ಡಿಎಸ್ಪಿ ಅನ್ನು ಅಟ್ಟಾಡಿಸಿಕೊಂಡು ಥಳಿಸಿದ್ದಾರಲ್ಲದೆ ಒಬ್ಬ ನಾಯಕ ತನ್ನ ತಲೆಯಿಂದ ಡಿಎಸ್ಪಿ ತಲೆಗೆ ಪದೆ ಪದೆ ಗುದ್ದಿದ್ದಾನೆ.
ಕೆಂಪು ಟೋಪಿ ಧರಿಸಿ ಈ ರೀತಿ ಗೂಂಡಾಗಿರಿ ನಡೆಸಿರುವ ವಿಡಿಯೊವನ್ನು ಹಂಚಿಕೊಂಡಿರುವ ಕೇಂದ್ರ ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, " ಏನು ಸಮಾಜವಾದಿ ನಾಯಕರೆ ಇದೇ ರೀತಿ ಮಾಫಿಯಾ ರಾಜ್, ಗೂಂಡಾ ರಾಜ್ ಮೂಲಕ ಮತ್ತೇ ಅಧಿಕಾರಕ್ಕೆ ಬರಲು ಬಯಸುತ್ತಿದ್ದೀರಾ? '' ಎಂದು ಟ್ವೀಟ್ ಮಾಡಿದ್ದಾರೆ.
ಸಮಾಜವಾದಿ ಕಾರ್ಯಕರ್ತರ ಗೂಂಡಾ ವರ್ತನೆಯನ್ನು ಟೀಕಿಸಿರುವ ಟ್ವಿಟರಿಗರು, ಕೆಂಪು ಟೋಪಿಯ ಸಮಾಜವಾದಿ ಗೂಂಡಾಗಳು ತಮ್ಮ ತರಬೇತಿಯ ಮಾದರಿ ಪ್ರದರ್ಶಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಅಧಿಕಾರ ಕಳೆದುಕೊಂಡ ಮೇಲೆ ಇದೇ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸರಕಾರಿ ಬಂಗಲೆಯ ಬಾಥ್ ರೂಂ ಹಾಗೂ ಟಾಯ್ಲೆಟ್ ಗಳಲ್ಲಿಯ ಬೆಲೆಬಾಳುವ ಟೈಲ್ಸ್ ಹಾಗೂ ಮಾರ್ಬಲ್ ಕಲ್ಲುಗಳನ್ನು ಕಿತ್ತುಕೊಂಡು ತಮ್ಮ ಮನೆಗೆ ಸಾಗಿಸಿದ್ದನ್ನು ಯುಪಿ ಜನ ಇನ್ನೂ ಮರೆತಿಲ್ಲ.
PublicNext
06/12/2021 11:49 am