ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ಸಚಿವ ಹಾಲಪ್ಪ ಆಚಾರ್ ಗೂ ಮುಖ್ಯಮಂತ್ರಿ ಆಗೋ ಯೋಗ ಇದೆ - ಶಿವನಗೌಡ ನಾಯಕ್

ಕೊಪ್ಪಳ: ಇನ್ನು ಹತ್ತು ಇಪ್ಪತ್ತು ವರ್ಷದಲ್ಲಿ ಹಾಲಪ್ಪ ಆಚಾರ್ ಗೆ ಮುಖ್ಯಮಂತ್ರಿ ಯೋಗ ಇದೆ ಎಂದು ಜಿಲ್ಲೆಯ ಕುಕನೂರ ತಾಲೂಕಿನ ಮಸಬ ಹಂಚಿನಾಳ ಗ್ರಾಮದಲ್ಲಿ ವಿಧಾನ ಪರಿಷತ್ ಚುನಾವಣೆ ಪ್ರಚಾರದಲ್ಲಿ ಶಿವನಗೌಡ ನಾಯಕ್ ಹೇಳಿದ್ದಾರೆ.

ನಾನು ಈಶ್ವರಪ್ಪನ ತರಹ ಇಂತವರೇ ಬೇಗ ಆಗಲಿ ಅಂತಾ ಹೇಳಲ್ಲ, ರಾಜಕೀಯ ಜೀವನದಲ್ಲಿ ಹಾಲಪ್ಪ ಆಚಾರ್ ಗೆ ಯೋಗ ಬಂದ್ರೆ ನಾವೇನೂ ಅನ್ನಲ್ಲ.ಭಗವಂತನ ಆಶೀರ್ವಾದ ಇದ್ರೆ, ಆಸ್ಥಾನಕ್ಕೆ ಅವರು ಮುಟ್ಟಲಿ,ಅವರಲ್ಲಿ ಆ ಶಕ್ತಿ ಇದೆ ಎಂದರು.

ಹಾಲಪ್ಪ ಆಚಾರ್ ಅತ್ಯಂತ ಸರಳ ರಾಜಕಾರಣಿ, ಯಾರೂ ಕೂಡಾ ಅವರನ್ನ ಮಂತ್ರಿ ಅಂದುಕೊಳ್ಳಲ್ಲ.ಇಂತಹ ಶಾಸಕನನ್ನು ಪಡಿದಿದ್ದು ನಿಮ್ಮ ಪುಣ್ಯ ಎಂದು ಹಾಲಪ್ಪ ಆಚಾರ್ ಅವರನ್ನು ಕೊಂಡಾಡಿದರು.

Edited By : Manjunath H D
PublicNext

PublicNext

03/12/2021 10:09 am

Cinque Terre

44.99 K

Cinque Terre

0

ಸಂಬಂಧಿತ ಸುದ್ದಿ