ಹುಬ್ಬಳ್ಳಿ:ಬಿಜೆಪಿ ನೇತೃತ್ವದ ಸರ್ಕಾರ ಜನ ಸಾಮಾನ್ಯರಿಗೆ ಸ್ಪಂದಿಸದ ಸರ್ಕಾರ, ಹಾನಗಲ್ ನಲ್ಲಿ ಹಣ, ಅಧಿಕಾರಿ, ತೋಳು ಬಲ ಪ್ರದರ್ಶನ ಮಾಡಿದ್ದರು. ಎಲ್ಲ ರೀತಿಯ ಭಯವನ್ನು ಪಡಿಸುವಂತ ಎಲ್ಲ ಪ್ರಯತ್ನವನ್ನು ಸಿಎಂ ಮಾಡಿದ್ದರು. ಆದರೂ ಅವರ ಸ್ವ ಕ್ಷೇತ್ರದಲ್ಲಿ ಜನರು ಬುದ್ಧಿ ಕಲಿಸಿದ್ದಾರೆ ಎಂದು ಎಂ.ಎಲ್.ಸಿ ಬಿ.ಕೆ.ಹರಿಪ್ರಸಾದ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ರೈತರ ಚಳುವಳಿಯನ್ನು ಹತ್ತಿಕ್ಕುವ ಕೆಲಸವನ್ನು ಮೋದಿ ಮಾಡಿದ್ದರು. ಪ್ರತಿಭಟನೆ ಮಾಡಿದ ರೈತರನ್ನು ಪಾಕಿಸ್ತಾನ, ಕಲಿಸ್ತಾನ್ ಅಂತ ಹೇಳಿದ್ದರು. ಆದರೆ ಯಾವುದೇ ಚರ್ಚೆ ಇಲ್ಲ ಮಸೂದೆಯನ್ನು ವಾಪಸ್ ಪಡೆದಿದ್ದಾರೆ ಎಂದು ಲೇವಡಿ ಮಾಡಿದರು.
ಪ್ರವಾಹದಿಂದ ಬಹಳಷ್ಟು ಹಾನಿಯಾಗಿದೆ. ಇದರ ಮಧ್ಯೆ ಯಾವುದೇ ಪರಿಹಾರಕ್ಕೆ ಸರ್ಕಾರ ಮುಂದಾಗಿಲ್ಲ.
ಅದರ ಬದಲು ನಿನ್ನೆ ಇಬ್ಬರು ಶಾಸಕರು ಕುಸ್ತಿ ಆಡಿದನ್ನು ನೋಡಿದ್ದೇವೆ ಎಂದು ಬಿಜೆಪಿ ಶಾಸಕರ ಜಗಳಕ್ಕೆ ಹರಿಪ್ರಸಾದ್ ವ್ಯಂಗ್ಯವಾಡಿದರು.
PublicNext
02/12/2021 01:47 pm