ಮುಂಬೈ: ಭಾರತದಲ್ಲಿ ರಾಜಕಾರಣ ಮಾಡಲಿಕ್ಕೆ ಭಾರತದಲ್ಲಿಯೇ ಇರಬೇಕು. ವರ್ಷದ 6 ತಿಂಗಳು ವಿದೇಶದಲ್ಲಿದ್ದು ಮತ್ತೆ ಇಲ್ಲಿಗೆ ಬಂದು ರಾಜಕಾರಣ ಮಾಡ್ತೀನಿ ಅಂದ್ರೆ ಹೇಗೆ ಎಂದು ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದಾರೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ.
ಮಮತಾ ಬ್ಯಾನರ್ಜಿ ನಗರದಲ್ಲಿ ನಡೆದಿದ್ದ ಪತ್ರಕರ್ತರು,ಕಲಾವಿದರು ಮತ್ತು ನಾಗರಿಕ ಸಂಘಟನೆಯಗಳ ಜೊತೆಗೆ ಸಂವಾದದಲ್ಲಿ ಮಾತನಾಡುವಾಗ ಈ ವಿಷಯ ಹೇಳಿದ್ದಾರೆ.
ಬಿಜೆಪಿ ವಿರುದ್ಧ ಕಾಂಗ್ರೆಸ್ ಗೆ ಪರ್ಯಾಯ ವ್ಯವಸ್ಥೆ ಬೇಕು. ಆದರೆ ಹೋರಾಟವೇ ಮಾಡದಿರೋ ಪಕ್ಷ ಕಾಂಗ್ರೆಸ್. ಇಂತಹ ಪಕ್ಷಕ್ಕೆ ನಾನು ಹೇಗೆ ಬೆಂಬಲ ಕೊಡಲು ಸಾಧ್ಯ ಅಂತಲೂ ಪ್ರಶ್ನಿಸಿದ್ದಾರೆ ಮಮತಾ ಬ್ಯಾನರ್ಜಿ.
ಯುಪಿಎ ಎನ್ನುವುದು ಇತಿಹಾಸವಾಗಿದೆ.ಯುಪಿಎ ಎಂದರೇನು ? ಅದು ಎಲ್ಲಿದೆ ? ಎಂದು ಮಮತಾ ಬ್ಯಾನರ್ಜಿ ಕೇಳಿದ್ದಾರೆ.
PublicNext
02/12/2021 01:30 pm