ಬಳ್ಳಾರಿ: ವಿಜಯನಗರ ಭಾಗದ ಜನರ ಬೇಡಿಕೆಯಂತೆ ಜಿಲ್ಲೆ ರಚನೆ ಆಗಿದಿದ್ರೆ ನಾನು ರಾಜಕೀಯ ನಿವೃತ್ತಿ ಪಡೆಯಬೇಕೆಂಬ ತೀರ್ಮಾನ ಮಾಡಿದ್ದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಕೂಡ್ಲಿಗಿಯಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಂದಿನ ಸಿಎಂ ಆಗಿದ್ದ ಯಡಿಯೂರಪ್ಪ ಅವರು ಮನಸು ಮಾಡಿದ್ದರು. ಅವರು ಸಚಿವ ಸಂಪುಟ ಸಭೆಯಲ್ಲೂ ಯಾವುದೇ ಆಕ್ಷೇಪ ಆಗದಂತೆ ನೋಡಿಕೊಂಡರು.ಒಂದು ಜಿಲ್ಲೆ ರಚನೆ ಆಗೋದು ಸುಲಭದ ಮಾತಲ್ಲ. ಒಂದು ವೇಳೆ ಜಿಲ್ಲೆ ರಚನೆ ಆಗದಿದ್ದಲ್ಲಿ ಜನರಿಗೆ ಹೇಗೆ ಮುಖ ತೋರಿಸುವುದು ಎಂಬ ಅಳುಕು ಕಾಡುತ್ತಿತ್ತು. ಮತ ಕೇಳುವಾಗ ಜನರಿಗೆ ಕೊಟ್ಟ ಭರವಸೆ ಈಡೇರಿಸುವುದೇ ದೊಡ್ಡ ಸವಾಲಾಗಿತ್ತು. ಭರವಸೆ ಈಡೇರಿಸಲಾಗದಿದ್ದರೆ ರಾಜಕೀಯ ನಿವೃತ್ತಿ ಪಡೆಯಬೇಕೆಂದು ತೀರ್ಮಾನಿಸಿದ್ದೆ. ಕೊನೆಗೂ ವಿಜಯನಗರ ಜಿಲ್ಲೆ ರಚನೆಯಾಯಿತು. ಈನಿಟ್ಟಿನಲ್ಲಿ ಯಡಿಯೂರಪ್ಪ ಅವರ ಋಣ ಮರೆಯಲಾಗದು ಎಂದು ಆನಂದ್ ಸಿಂಗ್ ಹೇಳಿದ್ದಾರೆ.
PublicNext
27/11/2021 10:28 pm