ದೆಹಲಿ:ನಮ್ಮ ಹಕ್ಕಿಗಾಗಿ ನಾವು ತಾಳ್ಮೆಯಿಂದ ಹೇಗೆ ಹೋರಾಡಬೇಕು ಅನ್ನೋದನ್ನ ರೈತರು ನಮಗೆ ಕಲಿಸಿಕೊಟ್ಟಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇವತ್ತು ಹೇಳಿದ್ದಾರೆ. ಹೀಗೆ ಹೇಳೋಕೆ ಒಂದು ಬಲವಾದ ಕಾರಣವು ಇದೆ. ಅದೇನೂ ಅಂತ ಹೇಳ್ತೀವಿ ಬನ್ನಿ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ವಿರೋಧಿಸಿದ್ದ ರೈತರು ಈಗ ಗೆದ್ದಿದ್ದಾರೆ. ಅವರ ಈ ಹೋರಾಟಕ್ಕೆ ಈಗ ಒಂದು ವರ್ಷ. ನವೆಂಬರ್-26.11.21 ಅಂದ್ರೆ ಇವತ್ತಿಗೆ ಅವರ ಹೋರಾಟಕ್ಕೆ ಒಂದು ವರ್ಷ ಪೂರ್ಣ ಆಗುತ್ತದೆ.
ಇದೇ ಹಿನ್ನೆಲೆಯಲ್ಲಿಯೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ರೈತರ ಈ ಹೋರಾಟವನ್ನ ನೆನಪಿಸಿಕೊಂಡಿದ್ದಾರೆ. ತಮ್ಮ ಹಕ್ಕಿಗಾಗಿ ತಾಳ್ಮೆಯಿಂದ ಹೇಗೆ ಹೋರಾಡಬೇಕು ಅನ್ನೋದನ್ನ ರೈತರು ನಮಗೆ ಕಲಿಸಿಕೊಟ್ಟಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
PublicNext
26/11/2021 02:45 pm