ದಾವಣಗೆರೆ: ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶೇಕಡಾ 40ರಷ್ಟು ಪರ್ಸಂಟೇಜ್ ನೀಡಬೇಕೆಂದು ಗುತ್ತಿಗೆದಾರರು ಪ್ರಧಾನಿಗೆ ಪತ್ರ ಬರೆದಿರುವ ವಿಚಾರ ಈಗ ಆಡಳಿತ ಮತ್ತು ವಿರೋಧಪಕ್ಷಗಳ ನಡುವೆ ಜಟಾಪಟಿಗೆ ಕಾರಣವಾಗಿದೆ. ಭ್ರಷ್ಟಾಚಾರ ನಡೆಸುತ್ತಿರುವ ಸರ್ಕಾರ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡರು ರಾಜ್ಯಪಾಲರಿಗೆ ನೀಡಿರುವ ದೂರು ಅತ್ಯಂತ ಹಾಸ್ಯಾಸ್ಪದ ಮನವಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಾಂಟ್ರಕ್ಟರ್ ಗಳಿಗೆ ಯಾವ ಅವಧಿಯಲ್ಲಿ ಅನುಭವ ಆಗಿದೆ ಎಂಬ ಬಗ್ಗೆ ಪತ್ರದಲ್ಲಿ ಬರೆದಿಲ್ಲ. ಪರ್ಸೆಂಟ್ ಜನಕರಿದ್ದರೇ ಅದು ಕಾಂಗ್ರೆಸ್ ಗರು. ಆ ಪರ್ಸೆಂಟ್ ಜಾಸ್ತಿಯಾಗಿದ್ದರೇ ಅದು ಕಾಂಗ್ರೆಸ್ ಕಾಲದಲ್ಲಿ ಎಂದು ಆರೋಪಿಸಿದರು.
ಪರ್ಸೆಂಟೇಜ್ ಬಗ್ಗೆ ಮಾತನಾಡಿದ ವಿಡಿಯೋ ಪ್ರಚಾರ ಆಗಿದ್ದು ಎಲ್ಲರಿಗೂ ಗೊತ್ತಿದೆ. ಪರ್ಸೆಂಟ್ ಜಾಸ್ತಿಯಾಗಿದ್ದು ಕಾಂಗ್ರೆಸ್ ಅವಧಿಯಲ್ಲೇ. ಕೊಟ್ಟಿರುವ ಪತ್ರದಲ್ಲೇ ಸ್ಪಷ್ಟತೆ ಇಲ್ಲ.ಯಾವ ಕಾಲದಲ್ಲಿ ಹೀಗೆ ಆಗಿದೆ ಎಂಬ ಮಾಹಿತಿಯು ಪತ್ರದಲ್ಲಿಲ್ಲ.ಕಾಂಗ್ರೆಸ್ ಅವಧಿಯ ಟೆಂಡರ್ ಗಳನ್ನು ತನಿಖೆ ಮಾಡಿಸುತ್ತೇವೆ ಎಂದು ತಿಳಿಸಿದರು.
ಎಸಿಬಿ ಗೆ ಮುಕ್ತ ಸ್ವಾತಂತ್ರ್ಯ ಕೊಟ್ಟಿದ್ದೇವೆ. ಇದರಿಂದ ಭ್ರಷ್ಟರ ಬಂಡವಾಳ ಬಯಲಾಗಿದೆ.ವ್ಯವಸ್ಥೆ ಶುದ್ಧೀಕರಣ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ. ಆದ್ದರಿಂದಲೇ ಈ ಕ್ರಮ ಆಗಿದೆ ಎಂದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದಲ್ಲಿ ಆ ರೀತಿ ಯಾವುದೇ ತೀರ್ಮಾನ ಆಗಿಲ್ಲ ಎಂದು ಸ್ಪಷ್ಟಪಡಿಸಿದ ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಅವರು ಜೆಡಿಎಸ್ ಜೊತೆ ಬೆಂಬಲ ಪಡೆಯುತ್ತೇವೆ ಎಂಬ ಬಗ್ಗೆ ಮಾತ್ರ ಹೇಳಿದ್ದಾರೆ. ಅವರ ತಮ್ಮ 40 ವರ್ಷದ ಅನುಭವದ ಮಾತನ್ನ ಹೇಳಿದ್ದಾರೆ. ನಾನು ಅವರ ಜೊತೆ ಚರ್ಚೆ ಮಾಡ್ತೀನಿ ಎಂದು ಹೇಳಿದರು.
PublicNext
26/11/2021 01:38 pm