ಪಂಜಾಬ್:ರಾಜ್ಯ ಸರ್ಕಾರ ಅತ್ಯಾಚಾರ ಪ್ರಕರಣ ಮತ್ತು ಡ್ರಗ್ಸ್ ಹಾವಳಿಯ ವರದಿಯನ್ನ ಬಹಿರಂಗಗೊಳಿಸಬೇಕು. ಇಲ್ಲದೇ ಹೋದಲ್ಲಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಕಾಂಗ್ರೆಸ್ ಪಕ್ಷದ ಪಂಜಾಬ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಎಚ್ಚರಿಕೆ ನೀಡಿದ್ದಾರೆ.
ಪಂಜಾಬ್ ನಲ್ಲಿ ಡ್ರಗ್ಸ್ ಹಾವಳಿ ಹೆಚ್ಚಿದೆ. ಇಲ್ಲಿಯ ಈ ಹಾವಳಿ ಮೇಲೆ ಉಡ್ತಾ ಪಂಜಾಬ್ ಹೆಸರಿನ ಚಿತ್ರವೂ ಬಂದಿದೆ.ಆದರೆ ನವಜೋತ್ ಸಿಂಗ್ ಸಿಧು,ರಾಜ್ಯ ಸರ್ಕಾರಕ್ಕೆ ಡ್ರಗ್ಸ್ ಹಾವಳಿಯ ವರದಿಯನ್ನ ಬಹಿರಂಗೊಳಿಸಿ ಅಂತಿದ್ದಾರೆ. ಅತ್ಯಾಚಾರ ಪ್ರಕರಣಗಳ ವರದಿಯನ್ನೂ ಸಾರ್ವಜನಿಕವಾಗಿ ಪ್ರಕಟಿಸಿ ಅಂತಲೂ ಆಗ್ರಹಿಸಿದ್ದಾರೆ.
ಒಂದು ವೇಳೆ ಸರ್ಕಾರ ಈ ಕೆಲಸವನ್ನ ಮಾಡದೇ ಇದ್ದರೇ, ಉಪವಾಸ ಸತ್ಯಾಗ್ರಹವನ್ನ ಮಾಡೋದಾಗಿಯೂ ನವಜೋತ್ ಸಿಂಗ್ ಸಿಧು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದ ಪಂಜಾಬ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಇವತ್ತು ಖಡಕ್ ಆಗಿಯೆ ರಾಜ್ಯ ಸರ್ಕಾರಕ್ಕೆ ಅವಾಜ್ ಹಾಕಿದ್ದಾರೆ.
PublicNext
25/11/2021 04:40 pm