ಬೆಳಗಾವಿ: ಡಿಸೆಂಬರ್ 10 ರಂದು ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಪರ ಮಾಜಿ ಶಾಸಕ ರಮೇಶ್ ಜಾರಕಿಹೊಳಿ ಆಗಮಿಸಿದರು. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಾಜಿ ಶಾಸಕ ರಮೇಶ್ ಜಾರಕಿಹೊಳಿ ಕೊಲ್ಹಾಪುರ ಮಹಾಲಕ್ಷ್ಮಿ ಪಾದ ಮುಟ್ಟಿ ಹೇಳುತ್ತೇನೆ ನಾನು ಟಿಕೆಟ್ ಬೇಡಿಲ್ಲ ಎಂದು ಹೇಳಿದ್ದಾರೆ.
ನಾನು ಸಹೋದರ ಲಖನ್ ಜಾರಕಿಹೊಳಿಗೆ ಬಿಜೆಪಿ ಎರಡನೇ ಟಿಕೆಟ್ ಬೇಡಿಲ್ಲ. ಮಹಾಂತೇಶ್ ಕವಟಗಿಮಠ ಮೊದಲ ಸುತ್ತಿನಲ್ಲಿ ಗೆಲ್ಲಿಸಲು ಸಂಕಲ್ಪ ಮಾಡಿದ್ದೇವೆ. ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಏನು ಮಾಡಬೇಕೋ ಎಲ್ಲಾ ಮಾಡುತ್ತೇವೆ.
ನವೆಂಬರ್ 29 ರಂದು ದೆಹಲಿಗೆ ತೆರಳಿ ವರಿಷ್ಠರ ಭೇಟಿಯಾಗಿ ಮನವೊಲಿಸುತ್ತೇನೆ. ಕಾಂಗ್ರೆಸ್ ಸೋಲಿಸಲು ಏನು ತಯಾರಿ ಮಾಡಬೇಕು ತಯಾರಿ ಮಾಡಿಕೊಳ್ಳುತ್ತೇವೆ. ವಿವೇಕರಾವ ಪಾಟೀಲ್ ಆದಷ್ಟು ಬೇಗ ಬಿಜೆಪಿ ಸೇರುತ್ತಾರೆ. ಎರಡು ವೋಟ್ ಇದ್ದು ಒಂದು ಲಖನ್ ಬೆಂಬಲ ನೀಡುತ್ತಾರೆ ಎಂದು ಹೇಳಿದ್ದಾರೆ.
PublicNext
23/11/2021 07:28 pm