ಕಲಬುರಗಿ:ಪ್ರಿಯಾಂಕ್ ಖರ್ಗೆ ಹೆಸರು ಗಂಡೋ ಹೆಣ್ಣೋ ಅಂತಲೇ ಇತ್ತೀಚಿಗೆ ಪ್ರತಾಪ್ ಸಿಂಹ ಟೀಕಿಸಿದ್ದರು. ಈ ಟೀಕೆಯನ್ನ ವಿರೋಧಿಸಿ ಕಲಬುರಗಿಯ ಸುಲಫಲ ಮಠದ ಮಹಾಂತ ಶಿವಾಚಾರ್ಯ ಶ್ರೀ ಗಳು ಪ್ರತಾಪ್ ಸಿಂಹ 15 ದಿನದಲ್ಲಿ ಕ್ಷಮೆಯಾಚಿಸಲೇಬೇಕು. ಕ್ಷಮೆ ಕೇಳದಿದ್ದರೇ ಚಪ್ಪಲಿಯಿಂದ ಹೊಡೆಯುತ್ತೇವೆ ಎಂದು ಮಹಾಂತ ಶಿವಾಚಾರ್ಯರು ಎಚ್ಚರಿಕೆ ನೀಡಿದ್ದಾರೆ.
ಕಲಬುರಗಿಯಲ್ಲಿ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಾಂತ ಶಿವಾಚಾರ್ಯರು ಮಾತನಾಡಿ, ಪ್ರತಾಪ್ ಸಿಂಹ ಮಾತನಾಡಿರೋದು ಸರಿಯಲ್ಲ.ಪ್ರಿಯಾಂಕ್ ಖರ್ಗೆ ಹೆಸರು ಹೆಣ್ಣೋ ಗಂಡೋ ಅಂತ ಕೇಳಿದ್ದು ಎಷ್ಟು ಸರಿ.ಇನ್ನು 15 ದಿನಗಳ ಒಳಗೆ ಪ್ರತಾಪ್ ಸಿಂಹ ಕ್ಷಮೆ ಕೇಳಲೇಬೇಕು. ಒಂದು ವೇಳೆ ಕ್ಷಮೆ ಕೇಳದೇ ಇದ್ದರೇ,ಪ್ರತಾಪ್ ಸಿಂಹ ಅವರ ಮೈಸೂರಿನ ಮನೆಗೆ ಹೋಗಿಯೇ ಚಪ್ಪಳಿಯಿಂದ ಹೊಡೆಯುತ್ತೇವೆ ಎಂದು ಹೇಳಿದ್ದಾರೆ ಶಿವಾಚಾರ್ಯರು ಸ್ವಾಮಿಜಿ.
PublicNext
21/11/2021 01:01 pm