ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದುಗೆ ಮತ್ತೆ ಕಾಗೆ ಕಂಟಕ?- ಕಾರಲ್ಲ, ಈ ಬಾರಿ ನಾಮಫಲಕ ಏರಿದ ಶನಿಯ ವಾಹನ

ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರಿಗೆ ಮತ್ತೆ ಕಾಗೆ ಕಂಟಕ ಎದುರಾಗಿದೆಯೇ ಎಂಬ ಚರ್ಚೆ ಹಲವೆಡೆ ಶುರುವಾಗಿದೆ.

ಹೌದು. ವಿಧಾನಸೌಧದ ಮೊದಲ ಮಹಡಿಯಲ್ಲಿ ಸಿದ್ದರಾಮಯ್ಯ ಅವರ ಕಚೇರಿ ಹೊರಗೆ ಹಾಕಿರುವ ಅವರ ನಾಮಫಲಕದ ಮೇಲೆ ಗುರುವಾರ (ನವೆಂಬರ್ 18ರಂದು) ಸಂಜೆ ಕಾಗೆಯೊಂದು ಸ್ವಲ್ಪ ಹೊತ್ತು ಕುಳಿತು ಹೋಗಿರುವುದು ಚರ್ಚೆಗೆ ಗ್ರಾಸವಾಗಿದೆ. ಸಾಮಾನ್ಯವಾಗಿ ವಿಧಾನಸೌಧದ ಒಳಗೆ ಕಾಗೆಗಳು ಬರುವುದಿಲ್ಲ. ಏನೋ ಕೆಟ್ಟ ಮುನ್ಸೂಚನೆ ಇರಬಹುದು ಎನ್ನುವ ಮಾತುಗಳು ಕೆಲವರಿಂದ ವ್ಯಕ್ತವಾಗಿವೆ.

ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಂದರೆ 2016 ಜೂನ್ 2 ರಂದು ಸಿಎಂ ಕಚೇರಿ ಕೃಷ್ಣಾದಲ್ಲಿ ಇದೇ ರೀತಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಕಾಗೆ ಕುಳಿತಿತ್ತು. ಆಗ ಜ್ಯೋತಿಷಿಗಳು ಎಚ್ಚರಿಕೆ ಸಂದೇಶದ ಮಾತುಗಳನ್ನು ಆಡಿದ್ದರು. ಇಂದರಿಂದಾಗಿ ಮುಂದೆ ಅದರಿಂದ ಕಂಟಕ ಎದುರಾಗಬಹುದು ಎಂದು ಸಿದ್ದರಾಮಯ್ಯ ಅವರು ಆ ಕಾರನ್ನು ಬದಲಿಸಿ ಹೊಸ ಕಾರನ್ನು ಪಡೆದಿದ್ದರು. ಆದರೆ ಕಾರು ಬದಲಾವಣೆ ಕುರಿತು ಸ್ಪಷ್ಟನೆ ನೀಡಿದ್ದ ಅವರು ಆ ಕಾರು ಸರಿಯಿಲ್ಲದ್ದರಿಂದ ಹೊಸ ಕಾರು ಪಡೆಯಲಾಗಿತ್ತು ಎಂದು ಸಮಜಾಯಿಷಿ ನೀಡಿದ್ದರು.

ಮತ್ತೊಂದು ಸಂದರ್ಭದಲ್ಲಿಯೂ ಸಿದ್ದರಾಮಯ್ಯ ಅವರಿಗೆ ಕಾಗೆಯಿಂದ ಕಾಟ ಕೊಟ್ಟಿತ್ತು. ನಂತರ ಕನ್ನಡದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮರಣಾರ್ಥವಾಗಿ ನಡೆದ 'ಗಿಳಿವಿಂಡು' ಎಂಬ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಆ ದಿನ ಅಲ್ಲಿ ಅವರ ಎಡ ತೊಡೆ ಮೇಲೆ ಕಾಗೆ ಹಿಕ್ಕೆ ಹಾಕಿತ್ತು. ಅವರ ಬಲಬದಿಯಲ್ಲಿ ಅಂದು ಮಾಜಿ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ, ಎಡಬದಿಯಲ್ಲಿ ಸಚಿವ ರಮಾನಾಥ ರೈ ಕೂತಿದ್ದರು. ಅದಾಗ್ಯೂ ಕಾಗೆ ಹಿಕ್ಕೆ ಸಿದ್ದರಾಮಯ್ಯ ಅವರ ಮೇಲೆ ಮಾತ್ರ ಬಿದ್ದಿದ್ದು, ಅದು ಶನಿಕಾಟ ಎಂದು ಅಂದು ಜ್ಯೋತಿಷಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು.

Edited By : Vijay Kumar
PublicNext

PublicNext

19/11/2021 07:49 am

Cinque Terre

66.26 K

Cinque Terre

28

ಸಂಬಂಧಿತ ಸುದ್ದಿ