ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾನು ಸಿಎಂ ಸ್ಥಾನಕ್ಕೆ ಆಸೆ ಪಟ್ಟಿರಲಿಲ್ಲ: ನಾಯಕರೇ ಕರೆದು ಈ ಹುದ್ದೆ ನೀಡಿದರು

ಕೊಪ್ಪಳ: ನಾನು ಮುಖ್ಯಮಂತ್ರಿ ಆಗಬೇಕೆಂದು ಆಸೆ ಪಟ್ಟಿದ್ದಿಲ್ಲ. ಅದಕ್ಕಾಗಿ ನಾನು ನಾಯಕರ ಬಳಿ ಹೋಗಿ ಮಾತಾಡಿರಲಿಲ್ಲ. ಸ್ವತಃ ಹಿರಿಯರೇ ನನಗೆ ಈ ಜವಾಬ್ದಾರಿ ಕೊಟ್ಟಿದ್ದಾರೆ. ಮೋದಿ, ಯಡಿಯೂರಪ್ಪ, ಅಮಿತ್ ಶಾ, ಜೆ.ಪಿನಡ್ಡಾ ನನಗೆ ಸಿಎಂ ಸ್ಥಾನ ನೀಡಿದ್ದಾರೆ. ಹೀಗಾಗಿ ಸುರಕ್ಷಿತ ನಾಡು ಕಟ್ಟೋದೇ ನನ್ನ ಮುಂದಿರುವ ಜವಾಬ್ದಾರಿ. ಸಮಾಜದ ಕಟ್ಟ ಕಡೆಯ ಮನುಷ್ಯನಿಗೆ ಬದುಕು ಕಟ್ಟಿಕೊಳ್ಳಲು ಎಲ್ಲ ರೀತಿಯ ಸೌಲಭ್ಯ ಕೊಡಬೇಕು ಅನ್ನೋದೇ ನನ್ನ ಆಸೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ನವರು ಅಧಿಕಾರದ ಕನಸು ಕಾಣುತ್ತಿದ್ದಾರೆ. ಅವರ ಕನಸು ಈಗ ಭಗ್ನವಾಗಿದೆ. ಇದೀಗ ನಮ್ಮ ಮೇಲೆ ಕೆಸರು ಎರಚುವ ಕೆಲಸ ಮಾಡ್ತಿದ್ದಾರೆ. ಬಿಟ್ ಕಾಯಿನ್ ನಾನಂತೂ ನೋಡಿಲ್ಲ.ಇದು ಕಾಂಗ್ರೆಸ್ ಕಾಲದಲ್ಲಿ ನಡೆದ ಅವ್ಯವಹಾರ. 2016ರಲ್ಲಿ ಬಿಟ್ ಕಾಯಿನ್ ಹಗರಣ ನಡೆದಿದೆ ಎಂದು ಸುರ್ಜೇವಾಲಾ ಹೇಳುತ್ತಿದ್ದಾರೆ. ಆಗ ಅಧಿಕಾರದಲ್ಲಿ ಯಾರಿದ್ರೂ ಎಂದು ಪ್ರಶ್ನಿಸಿದ ಬೊಮ್ಮಾಯಿ, ಸರಿಯಾಗಿ ತನಿಖೆ ಮಾಡಿದ್ರೆ ಎಲ್ಲಾ ಅವತ್ತೇ ಬಹಿರಂಗ ಆಗುತ್ತಿತ್ತು. ಅವತ್ತು ನೀವು ಯಾರನ್ನಾದರೂ ಬಿಟ್ಟಿದ್ರೆ, ನಾವು ಅವರನ್ನು ಅರೆಸ್ಟ್ ಮಾಡಿದ್ದೇವೆ. ಅವನ ಮೇಲೆ ಮೂರು ಕೇಸ್ ಹಾಕಿದ್ದೇವೆ ಎಂದರು.

ನನ್ನದು ಒಂದೇ ಒಂದು ಪ್ರಶ್ನೆ ನೀವು ಯಾಕೆ ಶ್ರೀಕಿಯನ್ನು ಬಿಟ್ರಿ? ಬಿಡೋರು ನೀವು, ಹಿಡಿಯೋರು ನಾವು. ನಮ್ಮ ನೀತಿ ಸ್ಪಷ್ಟವಾಗಿದೆ. ಯಾರೇ ಇದ್ರೂ ಎಷ್ಟೇ ದೊಡ್ಡವರು ಇದ್ರೂ ನಾವು ಕ್ರಮ ಕೈಗೊಳ್ಳುತ್ತೇವೆ. ಮುಲಾಜಿಲ್ಲದೇ ನಾವು ಕ್ರಮ ಕೈಗೊಳ್ಳುತ್ತೇವೆ. ಯಾರ ಯಾರ ಜೊತೆ ಹಗಲು ರಾತ್ರಿ ಕಳೆದಿದ್ದಾರೆ ಎಲ್ಲವೂ ಬಹಿರಂಗ ಆಗಲಿದೆ. ತನಿಖೆಯಲ್ಲಿ ಎಲ್ಲವೂ ಬಯಲಾಗಲಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.

Edited By : Nagesh Gaonkar
PublicNext

PublicNext

18/11/2021 07:35 pm

Cinque Terre

85.93 K

Cinque Terre

7

ಸಂಬಂಧಿತ ಸುದ್ದಿ