ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಗೆಳೆಯರಿಗಾಗಿ ಹೆಚ್ಚು ಆಸ್ತಿ ಸಂಪಾದಿಸುವುದನ್ನು ನಿಲ್ಲಿಸಿ, ಜನರಿಗಾಗಿ ಸರಿಯಾದ ನೀತಿಗಳನ್ನು ಜಾರಿಗೊಳಿಸಿ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.
ಜನರ ಹಸಿವು ನೀಗಿಸುವುದಕ್ಕೆ ಸಮುದಾಯ ಭೋಜನಾಲಯಗಳನ್ನು (ಕ್ಯಾಂಟೀನ್) ಆರಂಭಿಸುವಲ್ಲಿ ಕೇಂದ್ರ ಸರ್ಕಾರ ವಿಫಲಗೊಂಡಿದೆ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಈ ವರದಿಯನ್ನು ಉಲ್ಲೇಖ ಮಾಡಿರುವ ರಾಹುಲ್ ಗಾಂಧಿ, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, 'ಗೆಳೆಯರಿಗಾಗಿ ಹೆಚ್ಚು ಸಂಪಾದಿಸುವುದನ್ನು ನಿಲ್ಲಿಸಿ, ಜನರಿಗಾಗಿ ಸರಿಯಾದ ನೀತಿಗಳನ್ನು ಜಾರಿಗೊಳಿಸಿ' ಎಂದಿದ್ದಾರೆ.
PublicNext
17/11/2021 09:48 pm