ನವದೆಹಲಿ: ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಹಿಂದುತ್ವವನ್ನು ಇಸ್ಲಾಮಿಕ್ ಸ್ಟೇಟ್ ಹಾಗೂ ಬೊಕೊ ಹರಾಮ್ ಉಗ್ರ ಸಂಘಟನೆಗಳಿಗೆ ಹೋಲಿಕೆ ಮಾಡಿದ್ದಾರೆ. ಅವರ ಈ ಹೇಳಿಕೆಯನ್ನು ಕಾಂಗ್ರೆಸ್‌ನ ಇನ್ನೋರ್ವ ನಾಯಕ ಗುಲಾಂ ನಬಿ ಆಜಾದ್ ಖಂಡಿಸಿದ್ದಾರೆ.
ಸಲ್ಮಾನ್ ಖುರ್ಷಿದ್ ತಮ್ಮ ಇತ್ತೀಚಿನ ಪುಸ್ತಕದಲ್ಲಿ ಹಿಂದುತ್ವವನ್ನು ಇಸ್ಲಾಮಿಕ್ ಉಗ್ರ ಸಂಘಟನೆಗೆ ಹೋಲಿಕೆ ಮಾಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕರೇ ಆದ ಗುಲಾಂ ನಬಿ ಆಜಾದ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಆಜಾದ್, "ನಾವು ಹಿಂದುತ್ವವನ್ನು, ಹಿಂದೂ ಸಂಸ್ಕೃತಿಯಿಂದ ಬೇರೆಯದ್ದಾಗಿರುವ ರಾಜಕೀಯ ಸಿದ್ಧಾಂತವಾಗಿ ಒಪ್ಪದೇ ಇರಬಹುದು, ಆದರೆ ಹಿಂದುತ್ವವನ್ನು ಐಎಸ್ಐಎಸ್ ಹಾಗೂ ಜಿಹಾದಿ ಇಸ್ಲಾಮ್ ಗೆ ಹೋಲಿಕೆ ಮಾಡುವುದು ತಪ್ಪು ಹಾಗೂ ಉತ್ಪ್ರೇಕ್ಷೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
PublicNext
12/11/2021 07:26 am